ಹೊಸದಿಗಂತ ಡಿಜಿಟಲ್ ಡೆಸ್ಕ್
2024 ರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬಿಡೆನ್ ಮತ್ತೊಂದು ಅವಧಿಗೆ ಅಧ್ಯಕ್ಷ ಗಾದಿಗೆ ಸ್ಪರ್ಧಿಸುವುದನ್ನು ಹೆಚ್ಚಿನ ಅಮೆರಿಕನ್ನರು ಬಯಸುತ್ತಿಲ್ಲ ಎಂಬ ವಿಚಾರ ಸಮೀಕ್ಷೆಗಳಿಂದ ಬಯಲಾಗಿದೆ.
ಎಡಿಸನ್ ರಿಸರ್ಚ್ ಸಿಎನ್‌ಎನ್ ಮತ್ತು ಇತರ ಸುದ್ದಿ ನೆಟ್‌ವರ್ಕ್‌ಗಳು ನಡೆಸಿದ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಮೂರನೇ ಎರಡರಷ್ಟು ಮತದಾರರು ಅಧ್ಯಕ್ಷ ಜೋ ಬಿಡನ್ 2024 ರಲ್ಲಿ ಮರುಚುನಾವಣೆಗೆ ಸ್ಪರ್ಧಿಸುವುದನ್ನು ಬಯಸುವುದಿಲ್ಲ.
10 ಸ್ವತಂತ್ರ ಮತದಾರರಲ್ಲಿ 7 ಕ್ಕಿಂತ ಹೆಚ್ಚು ಮತ್ತು 10 ರಲ್ಲಿ 9 ರಿಪಬ್ಲಿಕನ್ ಮತದಾರರು ಬಿಡೆನ್ ಅವರು 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಾರದಲ್ಲಿರುವುದನ್ನು ನೋಡಲು ನಾವು ಬಯಸುವುದಿಲ್ಲ ಎಂದು ಹೇಳಿದ್ದಾರೆ. 10 ಡೆಮಾಕ್ರಟಿಕ್ ಮತದಾರರಲ್ಲಿ 6 ಕ್ಕಿಂತ ಕಡಿಮೆ ಜನರು ಅವರು ಮತ್ತೆ ಸ್ಪರ್ಧಿಸಬೇಕೆಂದು ಬಯಸುತ್ತಾರೆ. ಅದೇರೀತಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಷಯಕ್ಕೆ ಬಂದಾಗ, ಮೂರರಲ್ಲಿ ಎರಡರಷ್ಟು ಸ್ವತಂತ್ರ ಮತದಾರರು ಮತ್ತು 10 ಡೆಮಾಕ್ರಟಿಕ್ ಮತದಾರರಲ್ಲಿ 9 ಜನರು ಅವರ ಬಗ್ಗೆ ಪ್ರತಿಕೂಲವಾದ ದೃಷ್ಟಿಕೋನವನ್ನು ಹೊಂದಿದ್ದಾರೆ. ಕೇವಲ ಒಂದು ಭಾಗದಷ್ಟು ಮತದಾರರು ಅವರ ಬಗ್ಗೆ ಅನುಕೂಲಕರ ದೃಷ್ಟಿಕೋನವನ್ನು ಹೊಂದಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ