ಸಮವಸ್ತ್ರಕ್ಕೆ ಹಿಜಬ್ ಜೋಡಿಸುತ್ತಾರೋ? ‘ಸಮವಸ್ತ್ರ ಕಡ್ಡಾಯ’ ತೆಗೆಯುತ್ತಾರೋ: ಸಿಟಿ ರವಿ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಹಿಜಾಬ್ ನಿಷೇಧ ಮಾಡಿರಲಿಲ್ಲ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಏಕತೆ ಬೆಳೆಯಲಿ ಎಂಬ ಕಾರಣಕ್ಕೆ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸಮವಸ್ತ್ರಕ್ಕೆ ಹಿಜಬ್ ಜೋಡಿಸುತ್ತಾರೋ ಅಥವಾ ಸಮವಸ್ತ್ರ ಕಡ್ಡಾಯ ಅನ್ನೋದನ್ನೇ ತೆಗೆಯುತ್ತಾರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಶಾಸಕ ಸಿ.ಟಿ. ರವಿ ಕುಟುಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಬಡವ ಬಲ್ಲಿದ ಎಂಬ ಭೇದ, ಜಾತಿಯ ತಾರತಮ್ಯ ಬರದೆ ನಾವೆಲ್ಲರೂ ಸಮಾನರು ಎಂಬ ಮಾನಸಿಕತೆಯಲ್ಲಿ ಕಲೀಯಬೇಕು ಎನ್ನುವ ಉದ್ದೇಶದಿಂದ ಕಾಲೇಜು ಆಡಳಿತ ಮಂಡಳಿ ತೀರ್ಮಾನಿಸುವ ಸಮವಸ್ತ್ರ ಪಾಲಿಸಬೇಕು ಅಂತ ನಿಯಮವಿತ್ತು. ಈಗ ಮುಖ್ಯಮಂತ್ರಿಗಳಿಗೆ ಶಾಲೆಗಳಲ್ಲೂ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಗುರುತು ಇರಬೇಕು, ಇದರಿಂದ ಒಡೆದು ಆಳಲು, ರಾಜಕಾರಣ ಮಾಡಲು ಸುಲಭ ಅಂತ ಅನ್ನಿಸಿರಬಹುದು. ಆ ಕಾರಣಕ್ಕೆ ತರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿಗಳು ಎಲ್ಲಾ ಯೂನಿಫಾರಂಗೂ ಹಿಜಬ್ ಕಡ್ಡಾಯ ಮಾಡಲು ಹೊರಟಿದ್ದಾರೋ ಅಥವಾ ಅವರಿಷ್ಟದಂತೆ ಮಾಡಲು ಹೊರಟಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದೂ ಅವರು ಇದೇ ಸಂದರ್ಭ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!