ಬೆಳಗ್ಗೆ ಎದ್ದಾಗ ಒಂದು ಟೀ ಅಥವಾ ಕಾಫಿ, ಟಿಫನ್ ನಂತರ ಮತ್ತೊಂದು, ಮಧ್ಯಾಹ್ನ ಊಟದ ಬಳಿಕ ಮತ್ತೊಂದು—ಹೀಗೆ ದಿನದಲ್ಲಿ ಐದಾರು ಬಾರಿ ಟೀ, ಕಾಫಿ ಕುಡಿಯೋರಿಗೇನು ಕಡಿಮೆ ಅಲ್ಲ. ಆದರೆ ವೈದ್ಯಕೀಯ ಸಂಶೋಧನಾ ಅಧ್ಯಯನದ ಪ್ರಕಾರ ಟೀ ಮತ್ತು ಕಾಫಿ ಸೇವನೆಗೆ ಸಂಬಂಧಿಸಿದ ಎಚ್ಚರಿಕೆಯನ್ನು ನೀಡಿದೆ.
ಊಟಕ್ಕೂ ಮುನ್ನ ಅಥವಾ ಊಟವಾದ ನಂತರ ತಕ್ಷಣ ಟೀ ಅಥವಾ ಕಾಫಿ ಸೇವನೆ ತಪ್ಪು ಎಂದು ಸಂಶೋಧನೆ ಹೇಳಿದೆ. ಯಾಕೆ ಅಂದ್ರೆ ಉತ್ತರ ಇಲ್ಲಿದೆ ನೋಡಿ
- ಕಬ್ಬಿಣ ಹೀರಿಕೊಳ್ಳುವುದನ್ನು ತಡೆಯುವುದು: ಟೀ ಮತ್ತು ಕಾಫಿಯಲ್ಲಿನ ಟ್ಯಾನಿನ್ ಆಹಾರದಲ್ಲಿ ಇರುವ ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿ ಪಡಿಸುತ್ತೇವೆ, ಇದರಿಂದ ರಕ್ತಹೀನತೆ ಉಂಟಾಗುತ್ತೆ.
- ಕೆಫೀನ್ ಪರಿಣಾಮ: ಟೀ ಮತ್ತು ಕಾಫಿಯ ಕೆಫೀನ್ ಕೇಂದ್ರ ನರಮಂಡಲವನ್ನು ಒಂದು ಬಾರಿಗೆ ಉತ್ತೇಜಿಸುತ್ತದೆ, ಶಾರೀರಿಕ ಚಟುವಟಿಕೆ ಹೆಚ್ಚಿಸುತ್ತದೆ, ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವನೆಯು ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚಿಸಬಹುದು.
- ಆಹಾರ ಸೇವನೆ ನಿಯಂತ್ರಣ: ಟೀ ಅಥವಾ ಕಾಫಿಯನ್ನು ಮಿತವಾಗಿ ಸೇವಿಸಿ, ದಿನನಿತ್ಯದ ಶಕ್ತಿ, ಶಾಂತಿ ಮತ್ತು ಹೊಟ್ಟೆ ಆರೋಗ್ಯ ಕಾಯ್ದುಕೊಳ್ಳುವುದು ಉತ್ತಮ.