March 25, 2026
Wednesday, March 25, 2026
spot_img

ರುಚಿಗೋಸ್ಕರ ಪ್ರತಿದಿನ ಮಾಂಸ ತಿನ್ನುತ್ತಿದ್ದೀರಾ? ಹಾಗಾದ್ರೆ ಈ ‘ಸೈಲೆಂಟ್ ಕಿಲ್ಲರ್’ ಬಗ್ಗೆ ಎಚ್ಚರ!

ಮಾಂಸಾಹಾರವು ಪ್ರೋಟೀನ್ ಮತ್ತು ಪೋಷಕಾಂಶಗಳ ಉತ್ತಮ ಮೂಲ ಎಂಬುದು ನಿಜ. ಆದರೆ, “ಅತಿಯಾದರೆ ಅಮೃತವೂ ವಿಷ” ಎಂಬ ಗಾದೆಯಂತೆ, ಪ್ರತಿದಿನ ಮಾಂಸ ಸೇವಿಸುವುದು ನಿಮ್ಮ ದೇಹದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅದರಲ್ಲೂ ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸದ ಅತಿಯಾದ ಬಳಕೆ ಆರೋಗ್ಯಕ್ಕೆ ಮಾರಕವಾಗಬಹುದು.

ಮಾಂಸದಲ್ಲಿ ನಾರಿನಂಶ ಇರುವುದಿಲ್ಲ. ಇದರಿಂದ ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕೆಂಪು ಮಾಂಸದಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಾಗಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ, ಹೃದಯಾಘಾತದ ಅಪಾಯವನ್ನು ತಂದೊಡ್ಡಬಹುದು.

ಮಾಂಸಾಹಾರದಲ್ಲಿ ಕ್ಯಾಲೋರಿಗಳು ಹೆಚ್ಚಿರುವುದರಿಂದ ಅತಿಯಾದ ಸೇವನೆಯು ಬೊಜ್ಜು ಅಥವಾ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ.

ಹೆಚ್ಚಿನ ಪ್ರೋಟೀನ್ ಅನ್ನು ಸಂಸ್ಕರಿಸಲು ಕಿಡ್ನಿಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ, ಇದು ದೀರ್ಘಕಾಲದ ಕಿಡ್ನಿ ಕಾಯಿಲೆಗಳಿಗೆ ದಾರಿಯಾಗಬಹುದು.

ಸಂಸ್ಕರಿಸಿದ ಮಾಂಸ ತಿನ್ನುವುದರಿಂದ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಸಂಶೋಧನೆಗಳ ಪ್ರಕಾರ, ಪ್ರತಿದಿನ ಮಾಂಸ ಸೇವಿಸುವವರಲ್ಲಿ ರಕ್ತದ ಸಕ್ಕರೆ ಮಟ್ಟ ಏರುಪೇರಾಗುವ ಸಾಧ್ಯತೆ ಅಧಿಕವಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !