ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಟಿವಿ ಅಥವಾ ಮೊಬೈಲ್ ನೋಡುತ್ತಾ ಆಹಾರ, ಸ್ನಾಕ್ಸ್ ತಿಂತಿದ್ದೀರಾ? ಹಾಗಾದ್ರೆ ಇಂದೇ ಈ ಅಭ್ಯಾಸ ಬಿಟ್ಟುಬಿಡಿ. ಹೀಗೆ ಮಾಡುವುದರಿಂದ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ!
- ಬೊಜ್ಜು, ಹೊಟ್ಟೆ ಸಮಸ್ಯೆ ಮತ್ತು ದುರ್ಬಲ ಕಣ್ಣುಗಳಂತಹ ಸಮಸ್ಯೆಗಳು ಉಂಟಾಗಬಹುದು.
- ಹೀಗೆ ತಿನ್ನುವುದರಿಂದ ಜಗಿಯದೆ ಬೇಗ ತಿನ್ನುತ್ತಾರೆ.ಇದರಿಂದ ಆಹಾರ ಬೇಗ ಜೀರ್ಣವಾಗುವುದಿಲ್ಲ.
- ಅಜೀರ್ಣ, ನೋವಿನಂತಹ ಸಮಸ್ಯೆಗಳು ಬರುತ್ತವೆ.
- ಈ ಅಭ್ಯಾಸ ದೀರ್ಘಕಾಲ ಮುಂದುವರಿದರೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳೂ ಬರುವ ಸಾಧ್ಯತೆ ಇದೆ.
- ಸಹಜವಾಗಿ ಟಿವಿ ನೋಡುವಾಗ ಅತಿಯಾಗಿ ತಿನ್ನುವುದು. ಈ ಕಾರಣದಿಂದಾಗಿ, ಹೊಟ್ಟೆಯಲ್ಲಿ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.
- ಹೆಚ್ಚಿನ ಊಟ ಸೇವನೆಯಾದರೆ ರಾತ್ರಿಯಿಡೀ ಸಮಸ್ಯೆ ಮುಂದುವರಿಯುತ್ತದೆ. ನಿದ್ದೆ ಬರಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಊಟವಾದ ನಂತರ ಟಿವಿ ನೋಡುವುದು ಉತ್ತಮ.