Tuesday, December 23, 2025

MAKEUP | ಮಕ್ಕಳನ್ನು ರೆಡಿ ಮಾಡಿ ಖುಷಿ ಪಡ್ತೀರಾ? ಇದನ್ನೊಮ್ಮೆ ಓದಿ, ಆಮೇಲೆ ಡಿಸೈಡ್‌ ಮಾಡಿ

ಮೇಕಪ್‌ ಮಾಡುವ ಕೆಲ ತಾಯಂದಿರು ತಮ್ಮ ಮಕ್ಕಳಿಗೂ ಸಣ್ಣ ವಯಸ್ಸಿನಿಂದಲೇ ಮೇಕಪ್‌ ರೂಢಿ ಮಾಡುತ್ತಾರೆ. ಶಾಲೆಯ ಸಣ್ಣ ಪುಟ್ಟ ಫಂಕ್ಷನ್‌ಗೂ ಲಿಪ್ಸ್‌ಟಿಕ್‌ ಹಚ್ಚುವುದು, ಐ ಲೈನರ್‌ ಹಾಗೂ ಐ ಮೇಕಪ್‌ ಮಾಡುವುದು ಕಾಣಸಿಗುತ್ತದೆ. ಆದರೆ ಇದು ಮಕ್ಕಳಿಗೆ ಸೇಫ್‌ ಅಲ್ಲ. ಯಾಕೆ ಗೊತ್ತಾ?

ಮಕ್ಕಳ ಚರ್ಮವು ತೆಳ್ಳಗಿರುತ್ತದೆ ಮತ್ತು ವಯಸ್ಕರ ಚರ್ಮದಷ್ಟು ರಕ್ಷಣಾತ್ಮಕ ತಡೆಗೋಡೆ ಹೊಂದಿರುವುದಿಲ್ಲ, ಆದ್ದರಿಂದ ರಾಸಾಯನಿಕಗಳು ಸುಲಭವಾಗಿ ಚರ್ಮದೊಳಗೆ ಹೋಗಬಹುದು. ಮೇಕಪ್‌ಗಳಲ್ಲಿ ಫಾರ್ಮಾಲ್ಡಿಹೈಡ್, ನ್ಯೂರೋಟಾಕ್ಸಿನ್ , ಮತ್ತು ಫಥಾಲೇಟ್ಸ್‌ನಂತಹ ಹಾನಿಕಾರಕ ರಾಸಾಯನಿಕಗಳಿರಬಹುದು, ಇದು ಮಕ್ಕಳ ಬೆಳವಣಿಗೆಗೆ ತೊಂದರೆ ಉಂಟುಮಾಡಬಹುದು.

ಚಿಕ್ಕ ಮಕ್ಕಳ ಚರ್ಮದ ಸೂಕ್ಷ್ಮಜೀವಿಗಳ ಸಮತೋಲನವನ್ನು ಮೇಕಪ್ ಉತ್ಪನ್ನಗಳು ಹಾಳುಮಾಡಬಹುದು, ವಿಶೇಷವಾಗಿ ಮೂರು ವರ್ಷದೊಳಗಿನ ಮಕ್ಕಳಿಗೆ ಒಳ್ಳೆಯದಲ್ಲ. ವಯಸ್ಕರಿಗೆ ಹೋಲಿಕೆ ಮಾಡಿದರೆ, ಮಕ್ಕಳಲ್ಲಿ ಹೀರಿಕೊಳ್ಳುವಿಕೆಯು ಶೇ.10ರಷ್ಟು ಹೆಚ್ಚಾಗಿರುವುದು. ಇದರಿಂದ ಲಿಪ್ ಸ್ಟಿಕ್ ನ ರಾಸಾಯನಿಕವು ತುಂಬಾ ಹಾನಿಕರ, ಅವರ ಚರ್ಮವು ಇದನ್ನು ಬೇಗನೆ ಹೀರಿಕೊಳ್ಳುವುದು ಮತ್ತು ಇದರ ಪರಿಣಾಮವು ಭವಿಷ್ಯದಲ್ಲಿ ಕಂಡುಬರುವುದು. ಮೇಕಪ್ ಹಚ್ಚಿಕೊಂಡರೆ ಆಗ ಮಕ್ಕಳ ದೇಹವು ವಿಷಕಾರಿ ಅಂಶಗಳನ್ನು ಹೀರಿಕೊಳ್ಳುವುದು

ಕೆಲವು ಮೇಕಪ್‌ಗಳಲ್ಲಿರುವ ಪಾದರಸದಂತಹ ಅಂಶಗಳು ರಕ್ತದಲ್ಲಿ ಸೇರಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಮೇಕಪ್ ನಲ್ಲಿರುವ ಕೆಲವೊಂದು ಅಂಶಗಳಿಂದಾಗಿ ಚರ್ಮವು ಒಣಗಿ ಹೋಗಬಹುದು ಮತ್ತು ಅದರಿಂದಾಗಿ ಚರ್ಮದಲ್ಲಿ ತುರಿಕೆ, ಕೆಂಪಾಗುವುದು ಮತ್ತು ಕಿರಿಕಿರಿ ಉಂಟಾಗಬಹುದು.

ಮೇಕಪ್‌ ಮಾಡಲೇಬೇಕು ಎಂದಾದರೆ ವೈದ್ಯರ ಬಳಿ ಅಥವಾ ಮಕ್ಕಳ ಪ್ರಾಡಕ್ಟ್ಸ್‌ಗಳನ್ನು ಮಾತ್ರ ಬಳಸಿ. ಅದು ಅಪರೂಪಕ್ಕೆ ಮಾಡಿದರೆ ಉತ್ತಮ. ಮಕ್ಕಳಿಗೆ ಈಗಿನಿಂದಲೇ ಮೇಕಪ್‌ ಮಾಡಿದರೆ ಮಾತ್ರ ಸುಂದರವಾಗಿ ಕಾಣಿಸುತ್ತಾರೆ ಎನ್ನುವ ಭಾವನೆ ಬೆಳೆಸಿದರೆ ಮುಂದೆ ಅವರ ಮಾನಸಿಕ ಆರೋಗ್ಯಕ್ಕೆ ಬೆಲೆತರಬೇಕಾಗುತ್ತದೆ.

error: Content is protected !!