April 4, 2026
Saturday, April 4, 2026
spot_img

ಪಿರೇಡ್ಸ್ ಟೈಮ್‌ನಲ್ಲಿ ಫುಡ್ ಕ್ರೇವಿಂಗ್ಸ್ ಕಾಡುತ್ತಿದೆಯೇ? ಇಲ್ಲಿದೆ ನೋಡಿ ಅಸಲಿ ಕಾರಣ!

ಋತುಸ್ರಾವ ಸಮಯದಲ್ಲಿ ಅತಿಯಾದ ಹಸಿವು ಅಥವಾ ಏನನ್ನಾದರೂ ತಿನ್ನಬೇಕು ಅನ್ನಿಸುವ ಹಂಬಲ ಸಾಮಾನ್ಯವಾದ ವಿಷಯ. ಇದಕ್ಕೆ ಮುಖ್ಯವಾಗಿ ನಮ್ಮ ದೇಹದಲ್ಲಿ ನಡೆಯುವ ಹಾರ್ಮೋನುಗಳ ಬದಲಾವಣೆಗಳೇ ಕಾರಣ.

ಮುಟ್ಟಿನ ಮೊದಲು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳ ಮಟ್ಟದಲ್ಲಿ ಬದಲಾವಣೆಯಾಗುತ್ತದೆ. ಇದು ಹಸಿವನ್ನು ಹೆಚ್ಚಿಸುತ್ತದೆ.

ಈ ಸಮಯದಲ್ಲಿ ಮೆದುಳಿನಲ್ಲಿ ‘ಹ್ಯಾಪಿ ಹಾರ್ಮೋನ್’ ಎಂದೇ ಕರೆಯಲ್ಪಡುವ ಸೆರೊಟೋನಿನ್ ಮಟ್ಟ ಕುಸಿಯುತ್ತದೆ. ಇದನ್ನು ಸರಿದೂಗಿಸಲು ನಮ್ಮ ದೇಹ ಸಕ್ಕರೆ ಅಥವಾ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಬಯಸುತ್ತದೆ.

ಈ ಸಮಯದಲ್ಲಿ ದೇಹದ ಮೆಟಬಾಲಿಸಂ (ಚಯಾಪಚಯ ಕ್ರಿಯೆ) ತುಸು ಹೆಚ್ಚಾಗುವುದರಿಂದ ದೇಹಕ್ಕೆ ಹೆಚ್ಚಿನ ಕ್ಯಾಲೋರಿಗಳ ಅಗತ್ಯವಿರುತ್ತದೆ.

ಹಾರ್ಮೋನ್ ಬದಲಾವಣೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರುಪೇರಾಗಿ, ಸಿಹಿ ಪದಾರ್ಥಗಳನ್ನು ತಿನ್ನುವ ಆಸೆ ಹೆಚ್ಚಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !