ರಾತ್ರಿ ಪದೇ ಪದೆ ಬಾತ್‌ರೂಮ್‌ಗೆ ಹೋಗ್ಬೇಕು ಅನಿಸ್ತಿದ್ಯಾ? ಹಾಗಿದ್ರೆ ನಿಮಗೆ ಆರೋಗ್ಯದ ಸಮಸ್ಯೆನಾ? ಇಲ್ಲಿದೆ ಸಂಪೂರ್ಣ ಮಾಹಿತಿ..
ರಾತ್ರಿ ಒಂಬತ್ತರ ನಂತರ ಅಥವಾ ಮಲಗುವ ಮುನ್ನ ಏನಾದರೂ ನೀರು ಹೆಚ್ಚಾಗಿ ಕುಡಿದಿದ್ದರೂ ಪದೇ ಪದೆ ವಾಶ್‌ರೂಮ್‌ಗೆ ಹೋಗ್ಬೇಕು ಎನಿಸುತ್ತದೆ ಇದು ಕಾಮನ್. ಇನ್ನು ಎಷ್ಟೋ ಮಂದಿ ಡಯಾಬಿಟಿಸ್ ಪೇಷೆಂಟ್ಸ್ ಕೂಡ ಮೂರ್ನಾಲ್ಕು ಬಾರಿ ವಾಶ್‌ರೂಮ್ ಬಳಕೆ ಮಾಡುತ್ತಾರೆ.
ರಾತ್ರಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಅನೇಕ ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿರಬಹುದು. ಶುಗರ್ ಒಂದೇ ಇದಕ್ಕೆ ಕಾರಣವಲ್ಲ. ಆದರೆ, ಈ ಸಮಸ್ಯೆಗಳು ಕೂಡ ಕಾರಣವಾಗಿರಬಹುದು. ಮುಖ್ಯವಾಗಿ 50 ರಿಂದ 55 ವರ್ಷದ ನಂತರ ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಊತದಿಂದ ಉಂಟಾಗುತ್ತದೆ. ಪ್ರಾಸ್ಟೇಟ್ ಗ್ರಂಥಿಯ ಊತದಿಂದಾಗಿ ಮೂತ್ರವು ಸರಿಯಾಗಿ ಹರಿಯುವುದಿಲ್ಲ. ದೇಹದಲ್ಲಿ ಸಂಗ್ರಹವಾಗುತ್ತದೆ. ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜಿಸಲು ಕೂಡ ಕಾರಣವಾಗುತ್ತದೆ.
ಸಾಮಾನ್ಯವಾಗಿ ರಾತ್ರಿ ಒಮ್ಮೆ ಮೂತ್ರ ವಿಸರ್ಜನೆ ಮಾಡುವುದು ಸಮಸ್ಯೆಯಲ್ಲ. ನಿದ್ರೆ ಮಾಡುತ್ತಿರುವ ಸಮಯದಲ್ಲಿ ಎಚ್ಚರವಾಗಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದನ್ನು ಒಂದು ಸಮಸ್ಯೆ ಎಂದು ಪರಿಗಣಿಸಬೇಕು. ವಿಶೇಷವಾಗಿ ನಾವು ಚಪ್ಪಟೆಯಾಗಿ ಮಲಗಿದಾಗ, ನಮ್ಮ ಕಾಲುಗಳಲ್ಲಿನ ರಕ್ತವು ದೇಹಕ್ಕೆ ಮತ್ತೆ ಪಂಪ್ ಆಗುತ್ತದೆ. ಅಲ್ಲಿ ಅದು ಮೂತ್ರಪಿಂಡಗಳಿಗೆ ಹೋಗಿ ಮೂತ್ರವಾಗಿ ಬದಲಾಗುತ್ತದೆ. ಇದರ ಪರಿಣಾಮ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತದೆ. ಇದಲ್ಲದೇ, ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳು ಸಹ ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ಮೂತ್ರಕೋಶದ ಮೇಲೆ ಒತ್ತಡವಿದ್ದರೆ ಈ ಸಮಸ್ಯೆಯೂ ಬರಬಹುದು.
‘ನೋಕ್ಟುರಿಯಾ’ ಎಂಬ ಕಾಯಿಲೆಯು ರಾತ್ರಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆಗೆ ಪ್ರಮುಖ ಕಾರಣವಾಗಬಹುದು. ಮಧುಮೇಹ ಇಲ್ಲದವರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಮೂತ್ರನಾಳದ ಸೋಂಕುಗಳು ನೋಕ್ಟುರಿಯಾಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತದೆ. ಈ ಆರೋಗ್ಯ ಸಮಸ್ಯೆಯು ನಿದ್ರಾಹೀನತೆ ಹಾಗೂ ಗಾಯದ ಅಪಾಯ ಹೆಚ್ಚಿಸುವುದಲ್ಲದೇ, ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ.
ಆರೋಗ್ಯದ ವಿಷಯದಲ್ಲಿ ಏನಾದರೂ ಮಾಮೂಲಿ ಅಲ್ಲ ಎನಿಸಿದರೆ ಸ್ವಲ್ಪವೂ ಯೋಚನೆ ಮಾಡದೆ ವೈದ್ಯರನ್ನು ಭೇಟಿ ಮಾಡಿ