ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಜನಕ್ಕೆ ಏನೆಲ್ಲಾ ಸಮಸ್ಯೆ ಇದೆ, ಜನ ಕಷ್ಟದಿಂದ ಕಣ್ಣೀರಿಡ್ತಿದ್ದಾರೆ, ಆದರೆ ಸಿಎಂ ಸಿದ್ದರಾಮಯ್ಯ ಮ್ಯಾಚ್ ನೋಡೋಕೆ ಸ್ಟೇಡಿಯಂಗೆ ಹೋಗಿದ್ದಾರೆ, ಅಲ್ಲೇನು ಪಾಕಿಸ್ತಾನ್ ಟೀಂ ಸಪೋರ್ಟ್ ಮಾಡೋಕೆ ಹೋಗಿದ್ದಾರಾ ಅಂತ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.
ಟೀಂ ಇಂಡಿಯಾ ಆಡೋವಾಗ ಮ್ಯಾಚ್ ನೋಡೋಕೆ ಹೋದ್ರೆ ಏನೋ ನಮ್ಮ ದೇಶಕ್ಕೆ ಸಪೋರ್ಟ್ ಮಾಡೋಕೆ ಹೋಗಿದ್ದಾರೆ ಅನ್ಬೋದು, ಆದ್ರೆ ಬೇರೆ ದೇಶದ ಮ್ಯಾಚ್ ನೋಡೋಕೆ ಹೋಗೋದ್ಯಾಕೆ? ಅಷ್ಟು ಫ್ರೀ ಇದ್ದಾರಾ? ನಮ್ಮ ರಾಜ್ಯದಲ್ಲಿ ಎಲ್ಲರು ಕಷ್ಟವಿಲ್ಲದೆ ಆರಾಮಾಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ರಾತ್ರಿ ಎಂಟು ಗಂಟೆಗೆ ಹೋಗಿ ಮ್ಯಾಚ್ ನೋಡ್ತೀರಾ, ಅದೇ ಎಂಟು ಗಂಟೆಗೆ ಇಲ್ಲಿ ಜನ ಕರೆಂಟ್ ಇಲ್ಲದೆ ಒದ್ದಾಡ್ತಿದ್ದಾರೆ ಅವರು ಕಾಣೋದಿಲ್ವಾ? ಎಂದಿದ್ದಾರೆ.