Wednesday, November 26, 2025

FOOD | ಫ್ರಿಡ್ಜ್ ನಲ್ಲಿ ಎಲ್ಲಾ ತರಕಾರಿನೂ ಸ್ವಲ್ಪ ಸ್ವಲ್ಪ ಉಳಿದಿದ್ಯಾ? ಹಾಗಿದ್ರೆ ಈ ಸಾಂಬಾರ್ ಟ್ರೈ ಮಾಡಿ

ಫ್ರಿಡ್ಜ್ ಓಪನ್ ಮಾಡಿದಾಗ ಎಲ್ಲ ತರಕಾರಿಯೂ ಸ್ವಲ್ಪ ಸ್ವಲ್ಪ ಉಳಿದಿದ್ಯಾ? ಇದ್ರಿಂದ ಏನು ಮಾಡೋದು ಅಂತ ಯೋಚಿಸೋದಕ್ಕಿಂತ ಮಿಕ್ಸ್ ವೆಜ್ ಸಾಂಬಾರ್ ಆಯ್ಕೆಯೇ ಸರಿ! ಉಳಿದಿರುವ ತರಕಾರಿಗಳನ್ನು ಒಟ್ಟಿಗೆ ಬಳಸಿ ತುಂಬಿದ ಒಳ್ಳೆಯ ಸಾಂಬಾರ್ ಸಿದ್ಧವಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ – 1 ಕಪ್
ಟೊಮೇಟೊ – 1
ಈರುಳ್ಳಿ – 1
ಉಳಿದಿರುವ ತರಕಾರಿಗಳು – ಹೂಕೋಸು, ಕ್ಯಾರೆಟ್, ಬೀನ್ಸ್, ಸೌತೆಕಾಯಿ, ಬೆಂಡೆಕಾಯಿ ಇತ್ಯಾದಿ
ಹುಣಸೆ – 1 ಟೇಬಲ್ ಸ್ಪೂನ್
ಸಾಂಬಾರ್ ಪುಡಿ – 2 ಟೇಬಲ್ ಸ್ಪೂನ್
ಹಸಿಮೆಣಸು – 2
ಉಪ್ಪು – ರುಚಿಗೆ
ಬೆಲ್ಲ – 1 ಟೀ ಸ್ಪೂನ್
ಎಣ್ಣೆ – 2 ಟೀ ಸ್ಪೂನ್
ಸಾಸಿವೆ, ಜೀರಿಗೆ
ಕರಿಬೇವು
ಕೆಂಪು ಮೆಣಸಿನಕಾಯಿ- 1
ಹಿಂಗು ಚಿಟಿಕೆ

ಮಾಡುವ ವಿಧಾನ:

ತೊಗರಿಬೇಳೆಯನ್ನು ಬೇಯಿಸಿ ಚೆನ್ನಾಗಿ ಮ್ಯಾಶ್ ಮಾಡಿ ಇಟ್ಟುಕೊಳ್ಳಿ.

ಎಲ್ಲಾ ತರಕಾರಿಗಳನ್ನು ಒಂದೇರೀತಿ ಕತ್ತರಿಸಿ ಕುಕ್ಕರ್‌ನಲ್ಲಿ ಸ್ವಲ್ಪ ಉಪ್ಪಿನ ಜೊತೆ ಬೇಯಿಸಿಕೊಳ್ಳಿ.

ಈಗ ಬೇಯಿಸಿದ ತರಕಾರಿಗಳಿಗೆ ಹುಣಸೆ ನೀರು, ಸಾಂಬಾರ್ ಪುಡಿ, ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ಮ್ಯಾಶ್ ಮಾಡಿದ ದಾಲ್ ಸೇರಿಸಿ 5–7 ನಿಮಿಷ ಕುದಿಸಿ. ಪ್ಯಾನ್‌ನಲ್ಲಿ ಒಗ್ಗರಣೆ ಮಾಡಿ ಸಾಂಬಾರ್‌ಗೆ ಹಾಕಿ ಮಿಕ್ಸ್ ಮಾಡಿದರೆ ಸಾಂಬಾರ್ ರೆಡಿ.

error: Content is protected !!