ನಮ್ಮ ಜನ ಏನನ್ನಾದರೂ ಒಪ್ಪಿಕೊಳ್ತಾರೆ, ಆದರೆ ಗ್ಯಾಸ್ ಬಿಟ್ಟಿದ್ದು ನಾನು ಎಂದು ಮಾತ್ರ ಒಪ್ಪೋದಿಲ್ಲ. ಚಿಕ್ಕ ಶಬ್ದವೂ ಆಗದಂತೆ ಎಷ್ಟೋ ಮಂದಿ ಫಾರ್ಟ್ನ್ನು ಕಂಟ್ರೋಲ್ ಮಾಡಿಕೊಂಡು ರಿಲೀಸ್ ಮಾಡ್ತಾರೆ, ಕೆಲವರು ಕಂಟ್ರೋಲ್ ಮಾಡಿ ದೇಹದಿಂದ ಗ್ಯಾಸ್ ಹೊರಗೋಗದಂತೆ ಸುಮ್ಮನಾಗುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕೆ ನೋಡಿ..
- ಇದು ನೈಸರ್ಗಿಕವಾದ ಪ್ರಕ್ರಿಯೆ ಇಲ್ಲಿ ಮುಜುಗರ ಆಗುವಂಥದ್ದು ಏನೂ ಇಲ್ಲ, ನಿಮ್ಮ ದೇಹಕ್ಕೆ ಮಾರಕವಾದ ಗ್ಯಾಸ್ನ್ನು ದೇಹ ಹೊರಹಾಕಲು ನೋಡುತ್ತದೆ. ಇದನ್ನು ತಡೆದರೆ ನಿಮಗೇ ತೊಂದರೆ.
- ಕೆಳಭಾಗದ ಜೀರ್ಣಾಂಗ ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ಬೀರುತ್ತದೆ. ಇದರಿಂದಾಗಿ ಹೊಟ್ಟೆನೋವು ಬರುತ್ತದೆ.
- ಸದಾ ಹೊಟ್ಟೆ ಉಬ್ಬರ ಎನಿಸುತ್ತದೆ, ಗ್ಯಾಸ್ ಹೊರಹೋಗದಿದ್ದರೆ ವಾಕರಿಕೆ ಕೂಡ ಆಗುತ್ತದೆ.
- ನಿಮ್ಮ ದೇಹದಿಂದ ಹೊರ ಹೋಗಬೇಕಿದ್ದ ಕೆಟ್ಟ ಗಾಳಿ ದೇಹದಲ್ಲಿಯೇ ಉಳಿದುಕೊಂಡು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುತ್ತವೆ.
- ವಾಸನೆ ಬರುತ್ತದೆ ಎಂದು ಬಿಡದೇ ಹೋದರೆ, ಸ್ವಲ್ಪ ಸಮಯದ ನಂತರ ನೀವು ರಿಲೀಸ್ ಮಾಡಲು ಟ್ರೈ ಮಾಡಿದರೆ ಇನ್ನಷ್ಟು ಗಬ್ಬು ವಾಸನೆ ಬರುತ್ತದೆ.
- ಹೊಟ್ಟೆ ಹಸಿವಾದಾಗ ಗುಳುಗುಳು ಶಬ್ದ ಆಗೋದಿಲ್ಲ, ನೀವು ಗ್ಯಾಸ್ ಹೋಲ್ಡ್ ಮಾಡಿದಾಗ ಗ್ಯಾಸ್ ಹೊಟ್ಟೆಗೆ ಬಂದು ಇದೇ ರೀತಿ ಶಬ್ದ ಮಾಡುತ್ತದೆ.