ಕೆಲವರಿಗೆ ಎಣ್ಣೆಯುಕ್ತ ಚರ್ಮ ಇರುತ್ತದೆ, ಮೇಕಪ್ ಮಾಡಿದ ಕೆಲವೇ ನಿಮಿಷದಲ್ಲಿ ಮುಖದಲ್ಲಿ ಎಣ್ಣೆ ಕಾಣಿಸಿ ಮೇಕಪ್ ಅಂದಗೆಡಿಸುತ್ತದೆ. ಮೇಕಪ್ ಮಾಡಿಲ್ಲದಾಗಲೂ ಮುಖದಲ್ಲಿ ಎಣ್ಣೆ ಜಿಡ್ಡಿನಿಂದ ಮೊಡವೆಗಳು ಹೆಚ್ಚಾಗುತ್ತವೆ. ಹೀಗಿರುವಾಗ ಏನು ಮಾಡಬೇಕು?
- ದಿನದಲ್ಲಿ ಮೂರು ಬಾರಿ ಮುಖ ತೊಳೆಯಿರಿ, ಬೆಳಗ್ಗೆ, ಸಂಜೆ ಹಾಗೂ ವರ್ಕೌಟ್ ನಂತರ
- ಆಯಿಲ್ ಫ್ರೀ ಅಥವಾ ಮ್ಯಾಟ್ ಫಿನಿಷಿಂಗ್ ಇರುವ ಸ್ಕಿನ್ ಪ್ರಾಡಕ್ಟ್‌ಗಳನ್ನು ಬಳಕೆ ಮಾಡಿ
- ಹೆಚ್ಚು ಪಿಎಚ್ ಇರದ, ಜೆಂಟಲ್ ಆದ ಫೇಸ್‌ವಾಶ್ ಬಳಸಿ
- ಮುಖವನ್ನು ತೊಳೆದ ನಂತರ ಟವಲ್‌ನಲ್ಲಿ ಒರೆಸಬೇಡಿ, ಕೈಯಿಂದ ಮುಖದ ಮೇಲೆ ಟ್ಯಾಪ್ ಮಾಡುತ್ತಾ ನೀರನ್ನು ಹೋಗಿಸಿ.
- ಆಗಾಗ ಫೇಶಿಯಲ್ ಮಾಸ್ಕ್ ಬಳಸಿ
- ಮಾಯಿಶ್ಚರೈಸರ್ ಹಚ್ಚದೇ ಇರಬೇಡಿ.
- ವಾರಕ್ಕೊಮ್ಮೆ ಅಕ್ಕಿ ಹಿಟ್ಟು, ಕಡ್ಲೆಹಿಟ್ಟು ಮಿಶ್ರಣವನ್ನು ಹಚ್ಚಿ
- ಹೆಚ್ಚು ಎಣ್ಣೆ ಪದಾರ್ಥಗಳನ್ನು ಸೇವಿಸಬೇಡಿ.
- ಯಾವಾಗಲೂ ನೀರು ಕುಡಿಯುತ್ತಿರಿ
- ಮುಖ ಆಗಾಗ ಮುಟ್ಟುವ ಅಭ್ಯಾಸ ಇದ್ದರೆ ಬಿಟ್ಟುಬಿಡಿ