ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಗರು ಕುಚ್ಚಲಕ್ಕಿ ಪ್ರಿಯರು. ಇಲ್ಲಿಯ ಸಸ್ಯಾಹಾರಿಗಳಿರಲಿ, ಮಾಂಸಾಹಾರಿಗಳಿರಲಿ ಕುಚ್ಚಲಕ್ಕಿ ಗಂಜಿಗೆ ಜೈ ಎನ್ನುತ್ತಾರೆ. ಬೇರೆ ಊರುಗಳಿಂದ ನಾನಾ ಕಾರಣಗಳಿಗೆ ಬಂದವರೂ ಕರಾವಳಿಯ ಕುಚ್ಚಲಕ್ಕಿ ಅನ್ನ, ಗಂಜಿಗೆ ಮಾರುಹೋಗುತ್ತಾರೆ. ಉತ್ತಮ ಪೌಷ್ಠಿಕಾಂಶ ಹೊಂದಿರುವ ಕುಚ್ಚಲಕ್ಕಿ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಹಾರ. ಆದರೆ ಈ ಸಮಸ್ಯೆ ಇರುವವರು ಖಂಡಿತಾ ಈ ಅನ್ನವನ್ನು ಸೇವಿಸಲೇ ಬಾರದು!.
ಸಮತೋಲಿತ ಡಯಟ್ ವಿಚಾರ ಬಂದರೆ ಕುಚ್ಚಲಕ್ಕಿ ಹಾಗೂ ಬೆಳ್ತಿಗೆ ಎರಡೂ ಸೇವಿಸಬಹುದು. ಅನೇಕ ಮಂದಿಗೆ ಜೀರ್ಣದ ಸಮಸ್ಯೆಯಿರುತ್ತದೆ. ಕರುಳಿನ ಸಮಸ್ಯೆಯಿಂದ ಬಳಲುವ ಮಂದಿ ಈ ಕುಚ್ಚಲಕ್ಕಿಯಿಂದ ದೂರವಿರಲೇ ಬೇಕು. ಸುಲಭವಾಗಿ ಜೀರ್ಣವಾಗಬಲ್ಲ ಬೆಳ್ತಿಗೆಯನ್ನು ಸೇವಿಸಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ನಾರಿನಾಂಶ ಕಡಿಮೆ ಹೊಂದಿರುವ ಕಾರಣ ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ.
ಬೆಳ್ತಿಗೆ ಅಕ್ಕಿಯಿಂದ ಹೆಚ್ಚು ಹೊತ್ತು ಬೇಯಿಸಬೇಕಾಗುವ ಗುಣವನ್ನು ಈ ಅಕ್ಕಿ ಹೊಂದಿದೆ. ಕುಚ್ಚಲಕ್ಕಿಯ ಗಂಜಿ ಸದೃಢ ಆರೋಗ್ಯಕ್ಕೆ ಹೇಳಿಮಾಡಿಸಿದ್ದಾಗಿದೆ. ಗಂಜಿಯ ಜೊತೆಗೆ ತುಪ್ಪ ಸೇರಿಸಿ ಸೇವಿಸಿದ್ದೇ ಆದಲ್ಲಿ ನಿಶ್ಯಕ್ತಿ ದೂರವಾಗಿ ಆರೋಗ್ಯ ಉತ್ತಮವಾಗುತ್ತದೆ.