ಮನೆಯಲ್ಲಿ ಟೀನೇಜ್ ಮಕ್ಕಳಿದ್ರೆ ಅವರ ಚಾಯ್ಸ್, ಅವರ ಪ್ರೀತಿ, ಅವರ ಲೈಫ್ ಗೋಲ್ಸ್ ಪೋಷಕರಿಗೆ ಅರ್ಥ ಆಗೋದಿಲ್ಲ. ಇನ್ನು ಪೋಷಕರ ಕಾಳಜಿ ಮಕ್ಕಳ ಹತ್ತಿರಕ್ಕೂ ಸುಳಿಯೋದಿಲ್ಲ. ಹೀಗಿದ್ದಾಗ ಸಿನಿಮಾಗಳನ್ನು ಮಧ್ಯವರ್ತಿ ಮಾಡಿಕೊಳ್ಳಬಹುದು. ಮಕ್ಕಳಿಗೆ ಲೈಫ್ ಅರ್ಥ ಮಾಡಿಸುವ ಸಿನಿಮಾಗಳ ಲಿಸ್ಟ್ ಇಲ್ಲಿದೆ..
3 ಇಡಿಯಟ್ಸ್
ಆಮೀರ್ ಖಾನ್ ನಟನೆಯ ಥ್ರೀ ಇಡಿಯಟ್ಸ್ ಸಿನಿಮಾ ಎಷ್ಟು ಬಾರಿ ನೋಡಿದ್ರೂ ಬೋರ್ ಆಗೋದೇ ಇಲ್ಲ. ಕಾಲೇಜು, ಎಕ್ಸಾಂ, ಕೆಲಸದ ಪ್ರೆಶರ್ ಹಾಗೂ ಲೈಫ್‌ನ್ನು ನೋಡೋ ಪರ್ಸ್ಪೆಕ್ಟೀವ್ ಸಿನಿಮಾ ನೋಡಿದರೆ ಬದಲಾಗುತ್ತದೆ. ಹೀಗಾಗಿ ಮಕ್ಕಳ ಜೊತೆ ಕುಳಿತು ಈ ಸಿನಿಮಾ ನೋಡಿ..
ತಾರೇ ಝಮೀನ್ ಪರ್
ಇದು ಕೂಡ ಆಮೀರ್ ನಟನೆಯ ಸಿನಿಮಾ. ಒಂದು ಡಿಸಾರ್ಡರ್ ಇರುವ ಬಾಲಕ ಓದೋದಕ್ಕೆ ಕಷ್ಟ ಪಡ್ತಾನೆ. ಆದರೆ ಕಲೆ ವಿಭಾಗದಲ್ಲಿ ಆತ ಎಲ್ಲರಿಗಿಂತ ಅತ್ಯದ್ಭುತ ಪ್ರತಿಭೆಯಾಗಿರುತ್ತಾನೆ. ಪೋಷಕರ ಮನಸ್ಥಿತಿ ಹೇಗಿರುತ್ತದೆ. ಮಕ್ಕಳಿಗೆ ಏನೆಲ್ಲಾ ಭಾಸವಾಗುತ್ತದೆ ಎನ್ನುವ ವಿಷಯಗಳು ಸಿನಿಮಾದಲ್ಲಿದೆ.
ಗಂಟುಮೂಟೆ
ಕನ್ನಡದ ಗಂಟುಮೂಟೆ ಸಿನಿಮಾ ವೀಕ್ಷಿಸಿಲ್ಲ ಎಂದಾದರೆ ಇಂದೇ ವೀಕ್ಷಿಸಿ. ಟೀನೇಜರ್ಸ್‌ಗೆ ಬಟರ್‌ಫ್ಲೈ ಫೀಲಿಂಗ್ ಇರುತ್ತದೆ. ಆಪೋಸಿಟ್ ಸೆಕ್ಸ್ ಬಗ್ಗೆ ಅಟ್ರಾಕ್ಷನ್ ಇರುತ್ತದೆ. ಇದನ್ನು ಹೇಗೆ ನಿಭಾಯಿಸಬೇಕು. ಹೇಗೆ ಅರ್ಥ ಮಾಡಿಕೊಳ್ಳಬೇಕು ಅನ್ನೋದನ್ನು ನಾವು ಹೇಳೋ ಬದಲು ಸಿನಿಮಾ ತೋರಿಸಬಹುದು.
ಮೊಗ್ಗಿನ ಮನಸ್ಸು
ಇದು ನಮ್ಮ ಕನ್ನಡದ ಲೆಜೆಂಡರಿ ಸಿನಿಮಾ. ಚಿಗುರು ಮೀಸೆಯ ಮೊದಲ ಕನಸುಗಳು, ಆಸೆಗಳು, ಅದನ್ನು ನಿಭಾಯಿಸಿದರೆ ಹೇಗೆ ಅಥವಾ ನಿಭಾಯಿಸದೇ ಇದ್ದರೆ ಏನಾದೀತು? ನಿಜವಾದ ಪ್ರೀತಿ ಹೇಗೆ ಏನು ಎಂಬೆಲ್ಲಾ ಅಂಶಗಳು ಇಲ್ಲಿದೆ.
ಗರ್ಲ್ಸ್ ವಿಲ್ ಬಿ ಗರ್ಲ್ಸ್
ಇದು ಬಾಲಿವುಡ್ ಸಿನಿಮಾ, ಕೆಲವು ತಿಂಗಳ ಹಿಂದಷ್ಟೇ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಹುಡುಗಿಯೊಬ್ಬಳ ತನ್ನ ಸೆಕ್ಷುಯಾಲಿಟಿ ಡಿಸ್ಕವರ್ ಮಾಡುತ್ತಾಳೆ. ನೈಜ ಘಟನೆಗಳ ಆಧಾರಿತ ಸಿನಿಮಾ ಇದಾಗಿದೆ. ರಿಯಾಲಿಗೆ ಅತಿ ಹತ್ತಿರ ಎಂದು ಅನಿಸುತ್ತದೆ.
ಝಿಂದಗಿ ನಾ ಮಿಲೇಗಿ ದೊಬಾರಾ
ಇನ್ನು ಮಕ್ಕಳು ಕೆಲಸ, ಸಕ್ಸಸ್, ಬ್ಯುಸ್‌ನೆಸ್ ಎಂದು ಜಗತ್ತನ್ನೇ ಮರೆತಿದ್ದರೆ ಈ ಸಿನಿಮಾ ತೋರಿಸಿ. ಆಗಾಗ ಬ್ರೇಕ್ ತೆಗೆದುಕೊಳ್ಳೋದು ಬೆಸ್ಟ್ ಎಂದು ಹೇಳಿಕೊಡಿ.