ಇಂದಿನ ಕಾಲದಲ್ಲಿ ತಂತ್ರಜ್ಞಾನ ಜೀವನದ ಅವಿಭಾಜ್ಯ ಅಂಗವಾಗಿದೆ. ಬೆಳಗ್ಗೆ ಎದ್ದು ಕಣ್ಣು ತೆರೆದ ತಕ್ಷಣವೇ ಮೊಬೈಲ್ ನೋಡದೆ ದಿನ ಆರಂಭಿಸುವವರೇ ಇಲ್ಲದಂತಾಗಿದೆ. ಆದರೆ ಈ ಅಭ್ಯಾಸವು ಆರೋಗ್ಯದ ದೃಷ್ಟಿಯಿಂದ ತುಂಬಾ ಹಾನಿಕಾರಕ ಎಂದು ತಜ್ಞರು ಎಚ್ಚರಿಸುತ್ತಾರೆ. ಕಣ್ಣಿನ ಮೇಲೆ ನೇರವಾಗಿ ಬೆಳಕು ಬೀಳುವುದರಿಂದ ದೇಹದ ಜೈವಿಕ ಗಡಿಯಾರ ಅಸ್ತವ್ಯಸ್ತವಾಗುತ್ತದೆ. ಇದರಿಂದ ದಿನವಿಡೀ ಒತ್ತಡ, ತಲೆನೋವು ಮತ್ತು ದೃಷ್ಟಿ ಸಮಸ್ಯೆಗಳು ಎದುರಾಗುವ ಅಪಾಯವಿದೆ.
ಕಣ್ಣುಗಳಿಗೆ ಹಾನಿ ಮಾಡುವ ಬೆಳಕು
ಮುಂಜಾನೆ ಎದ್ದ ತಕ್ಷಣ ಮೊಬೈಲ್ ಸ್ಕ್ರೀನ್‌ನ ಕಿರಣಗಳು ಕಣ್ಣಿನ ಮೇಲೆ ನೇರವಾಗಿ ಬೀಳುತ್ತವೆ. ಇದರಿಂದ ಕಣ್ಣಿನ ನೈಸರ್ಗಿಕ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ದೀರ್ಘಾವಧಿಯಲ್ಲಿ ದೃಷ್ಟಿ ಕುಗ್ಗುವ ಸಾಧ್ಯತೆ ಹೆಚ್ಚಾಗುತ್ತದೆ.
ಮಾನಸಿಕ ಒತ್ತಡ ಹೆಚ್ಚಿಸುವ ಅಭ್ಯಾಸ
ಮೊಬೈಲ್ ನೋಡುತ್ತಿದ್ದಂತೆಯೇ ಮಿದುಳಿನಲ್ಲಿ ಒತ್ತಡ ಹಾರ್ಮೋನ್‌ಗಳು ಹೆಚ್ಚಾಗುತ್ತವೆ. ಇದರಿಂದ ಇಡೀ ದಿನದ ಕಾರ್ಯದಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. ದಿನವಿಡೀ ದಣಿವು, ತಲೆನೋವು ಹಾಗೂ ಚಡಪಡಿಕೆ ಹೆಚ್ಚಾಗಬಹುದು.
ಯೋಗ ಮತ್ತು ಧ್ಯಾನದಿಂದ ಪರಿಹಾರ
ಮುಂಜಾನೆ ಮೊಬೈಲ್ ಹಿಡಿಯುವ ಬದಲು ಯೋಗ, ಧ್ಯಾನ ಅಥವಾ ಸ್ವಲ್ಪ ವ್ಯಾಯಾಮ ಮಾಡುವುದರಿಂದ ದೇಹ-ಮನಸ್ಸು ತಾಜಾತನ ಹೊಂದುತ್ತದೆ. ಮುಖ ತೊಳೆಯುವುದು, ನೀರು ಕುಡಿಯುವುದು ಅಥವಾ ಪುಸ್ತಕ ಓದುವುದರಿಂದ ಈ ಅಭ್ಯಾಸವನ್ನು ನಿಧಾನವಾಗಿ ಬದಲಿಸಬಹುದು.
ದೀರ್ಘಾವಧಿ ಅಪಾಯ
ಮೊಬೈಲ್ ಬೆಳಕಿನ ಕಿರಣಗಳು ಕಣ್ಣು ಮತ್ತು ಮೆದುಳಿನ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದ ವಯಸ್ಸಾದ ಮೇಲೆ ಮಾತ್ರ ಕಾಣಿಸಬೇಕಾದ ದೃಷ್ಟಿ ಸಮಸ್ಯೆಗಳು ಬೇಗನೆ ಕಾಣಿಸಿಕೊಳ್ಳುತ್ತವೆ. ಇದರಿಂದ ನಿದ್ರಾಹೀನತೆ, ಒತ್ತಡ ಮತ್ತು ಮಾನಸಿಕ ಅಶಾಂತಿ ಉಂಟಾಗಬಹುದು.
ಮುಂಜಾನೆ ಎದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸವನ್ನು ಬಿಟ್ಟುಬಿಡುವುದು ಆರೋಗ್ಯಕ್ಕೆ ದೊಡ್ಡ ಹೂಡಿಕೆ. ದಿನದ ಆರಂಭದಲ್ಲಿ ಸ್ವಲ್ಪ ಧ್ಯಾನ, ಯೋಗ ಅಥವಾ ನೈಸರ್ಗಿಕ ಬೆಳಕನ್ನು ಅನುಭವಿಸುವುದರಿಂದ ದೇಹ-ಮನಸ್ಸು ಸಮತೋಲನ ಗೊಳ್ಳುತ್ತದೆ.