ಸ್ಮಾರ್ಟ್‌ಫೋನ್‌ ಕವರ್‌ನಲ್ಲಿ ನೋಟು ಇಡುವ ಅಭ್ಯಾಸ ನಿಮಗಿದ್ಯಾ? ತುಂಬಾ ದೊಡ್ಡ ತಪ್ಪು ಮಾಡ್ತಿದ್ದೀರಾ!

ಸ್ಮಾರ್ಟ್‌ಫೋನ್‌ ಇಂದಿನ ಜೀವನದ ಅವಿಭಾಜ್ಯ ಅಂಗವಾಗಿದ್ದರೂ, ಹಲವರು ಫೋನ್ ಬಳಕೆಯಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ವಿಶೇಷವಾಗಿ, ಕೆಲವರು ಫೋನ್‌ನ ಹಿಂಭಾಗದ ಕವರ್‌ನಲ್ಲಿ ನೋಟುಗಳು ಅಥವಾ ಎಟಿಎಂ ಕಾರ್ಡ್‌ಗಳನ್ನು ಇಡುವುದು ಸಾಮಾನ್ಯವಷ್ಟೇ ಅಲ್ಲ, ಉಪಯುಕ್ತವೆಂದು ಭಾವಿಸುತ್ತಾರೆ. ಆದರೆ ತಜ್ಞರ ಎಚ್ಚರಿಕೆಯಂತೆ ಈ ಅಭ್ಯಾಸ ನಿಮ್ಮ ಫೋನ್‌ಗೆ ಗಂಭೀರ ಹಾನಿಯನ್ನುಂಟುಮಾಡಬಹುದು.

ಫೋನ್‌ನ ಹಿಂಭಾಗವು ಶಾಖವನ್ನು ಹೊರಬಿಡುವ ವ್ಯವಸ್ಥೆಯನ್ನು ಹೊಂದಿದ್ದು, ನೋಟು ಅಥವಾ ಕಾರ್ಡ್‌ಗಳನ್ನು ಅಲ್ಲಿ ಇಟ್ಟರೆ, ಶಾಖ ಹೊರಹೋಗಲು ತಡೆಯಾಗುತ್ತದೆ. ಇದರಿಂದ ಫೋನ್ ಅತಿಯಾಗಿ ಬಿಸಿಯಾಗುವುದು ಮಾತ್ರವಲ್ಲ, ಕೆಲವೊಮ್ಮೆ ಬ್ಲಾಸ್ಟ್‌ಗೂ ಕಾರಣವಾಗಬಹುದು.

ಜೊತೆಗೆ ಫೋನ್ ಚಾರ್ಜ್ ಮಾಡುವಾಗ ಬ್ಯಾಟರಿ ಬಿಸಿ ಆಗುತ್ತದೆ. ಅದಕ್ಕೆ ಜೊತೆಗೆ ಕವರ್ ಒಳಗೆ ಇಡುವ ನೋಟುಗಳು ಅಥವಾ ಕಾರ್ಡ್‌ಗಳು ಶಾಖವನ್ನು ಹೊರಹೋಗದಂತೆ ತಡೆಹಿಡಿದು, ಫೋನ್ ಒಳಗೆ ತಾಪಮಾನ ಏರಿಕೆಯಾಗಬಹುದು. ಇದರಿಂದ, ಫೋನ್‌ನ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ. ಗೇಮಿಂಗ್, ವಿಡಿಯೋ ಸ್ಟ್ರೀಮಿಂಗ್ ಅಥವಾ ಕ್ಯಾಮೆರಾ ಬಳಸುವಾಗ ಈ ಸಮಸ್ಯೆ ಹೆಚ್ಚು ಗಂಭೀರವಾಗುತ್ತದೆ. ದುಬಾರಿ ಸ್ಮಾರ್ಟ್‌ಫೋನ್‌ಗಳು ಸಹ ಈ ತಪ್ಪಿಗೆ ಬಲಿಯಾಗಬಹುದು.

ಇತ್ತೀಚೆಗೆ ಫ್ಯಾಷನ್ ರೂಪದಲ್ಲಿ ದಪ್ಪ ಮತ್ತು ಬ್ಯೂಟಿಫುಲ್‌ ಕವರ್‌ಗಳನ್ನು ಬಳಸುವರು ಹೆಚ್ಚು. ಆದರೆ ಈ ಕವರ್‌ಗಳು ಫೋನ್‌ಗೆ ಗಾಳಿಯಾಡಲು ಅವಕಾಶ ನೀಡದೆ ಶಾಖ ತಡೆಹಿಡಿಯುತ್ತವೆ. ಪರಿಣಾಮವಾಗಿ, ಬ್ಯಾಟರಿ ಹೆಚ್ಚಿನ ತಾಪದತ್ತ ಚಲಿಸುತ್ತಾ, ಪರ್ಫಾರ್ಮೆನ್ಸ್ ಕುಗ್ಗಿಸುತ್ತವೆ. ಹೀಗಾಗಿ ಹಲವು ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗಿರುವ ಘಟನೆಗಳು ವರದಿಯಾಗಿವೆ.

ಈ ರೀತಿ ಮುನ್ನೆಚ್ಚರಿಕೆ 
ಫೋನ್ ಚಾರ್ಜ್ ಮಾಡುವಾಗ ಯಾವತ್ತೂ ಕವರ್‌ ತೆಗೆದುಹಾಕುವುದು ಉತ್ತಮ. ಮೃದುವಾದ, ಗಾಳಿಯಾಡುವ (ventilated) ಕವರ್‌ಗಳನ್ನು ಬಳಸಿ. ಕವರ್ ಹಿಂಭಾಗದಲ್ಲಿ ಯಾವುದೇ ವಸ್ತು ಇಡಬೇಡಿ. ಫೋನ್‌ನ್ನು ವ್ಯಾಲೆಟ್‌ ಆಗಿ ಬಳಸುವುದನ್ನು ನಿಲ್ಲಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!