ಎಷ್ಟೇ ವ್ಯಾಯಾಮ ಮಾಡಿದರೂ, ಅತ್ಯತ್ತಮ ಆಹಾರ ಸೇವನೆ ಮಾಡಿದರೂ ಸರಿಯಾಗಿ ನಿದ್ದೆ ಮಾಡದಿದ್ದರೆ ಎಲ್ಲವೂ ವೇಸ್ಟ್. ಮನುಷ್ಯನ ಆರೋಗ್ಯಕ್ಕೆ ಉತ್ತಮವಾದ ನಿದ್ದೆ ಬೇಕೇಬೇಕು. ಈ ನಿದ್ದೆಯಲ್ಲಿಯೂ ರೂಲ್ಸ್ ಇದೆ. ಈ 10 3 2 1 ರೂಲನ್ನು ನೀವು ಫಾಲೋ ಮಾಡಿ.. ಏನಿದರ ಅರ್ಥ?
10 ಅಂದರೆ ಉತ್ತಮವಾದ ಆರೋಗ್ಯಕ್ಕಾಗಿ ಮಲಗುವ 10 ಗಂಟೆಗಳ ಮುನ್ನ ಯಾವುದೇ ಕೆಫಿನ್ ಸೇವನೆ ಮಾಡಬೇಡಿ
3 ಎಂದರೆ ಮಲಗುವ ಮೂರು ಗಂಟೆಗಳ ಮುನ್ನ ಯಾವ ಆಹಾರವನ್ನೂ ತೆಗೆದುಕೊಳ್ಳಬೇಡಿ. ಮಲಗುವಾಗ ಹೊಟ್ಟೆ ಖಾಲಿ ಇರಲಿ. ನಿಮ್ಮ ದೇಹದ ಎಲ್ಲ ಅಂಗಗಳಿಗೂ ರೆಸ್ಟ್ ನೀಡಿ
2 ಎಂದರೆ ಮಲಗುವ ಎರಡು ಗಂಟೆಗಳ ಮುನ್ನ ಕೆಲಸ ಮುಗಿಸಿಬಿಡಿ, ಸ್ಕ್ರೀನ್‌ನಲ್ಲಿ ಕೆಲಸ ಮಾಡಿ, ಒತ್ತಡದಲ್ಲಿದ್ದು ತಕ್ಷಣವೇ ಮಲಗಬೇಡಿ
1 ಎಂದರೆ ಮಲಗುವ ಒಂದು ಗಂಟೆ ಮುನ್ನ ಮೊಬೈಲ್ ಅಥವಾ ಟಿವಿ ನೋಡುವುದನ್ನು ನಿಲ್ಲಿಸಿ. ಮೊಬೈಲ್ ನೋಡುತ್ತಾ ಮಲಗುವ ಅಭ್ಯಾಸ ಇಂದೇ ತ್ಯಜಿಸಿ
GOODNIGHT | ʼ10 3 2 1ʼ ರೂಲ್ ಬಗ್ಗೆ ನಿಮಗೆ ಗೊತ್ತಿದ್ಯಾ? ಮಲಗೋ ಮುನ್ನ ಇದನ್ನು ಓದ್ಲೇಬೇಕು

