DO YOU KNOW | ಮಾವಿನ ಹಣ್ಣಿನೊಂದಿಗೆ ಹಾಲು ಮಿಕ್ಸ್​ ಮಾಡಿ ಕುಡಿಯಬಹುದಾ? ಗೊತ್ತಾದ್ರೆ ಶಾಕ್ ಆಗ್ತೀರಾ ಪಕ್ಕಾ

ಪರಿಮಳದ ಮಾವಿನಹಣ್ಣು ಯಾರಿಗೆ ಇಷ್ಟ ಇಲ್ಲ ಹೇಳಿ! ಮಾರುಕಟ್ಟೆಯಲ್ಲಿ ಸಿಗುವ ಫ್ರೆಶ್ ಹಣ್ಣು ನೋಡಿ ಅದರಿಂದ ರುಚಿಕರವಾದ ಮಿಲ್ಕ್ ಶೇಕ್ ತಯಾರಿಸುವ ಆಸೆ ಆಗೋದು ಸಹಜ. ಆದರೆ ತಜ್ಞರ ಪ್ರಕಾರ, ಮಾವು ಮತ್ತು ಹಾಲಿನ ಈ ಕಾಂಬಿನೇಷನ್ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಹೇಳಲಾಗಿದೆ.

Mango Milkshake Recipe (Classic & Vegan Versions)

ಹೌದು, ಆಯುರ್ವೇದ ತಜ್ಞರ ಅಭಿಪ್ರಾಯದ ಪ್ರಕಾರ, ಹಾಲು ಮತ್ತು ಮಾವು ಎರಡು ವಿಭಿನ್ನ ಗುಣಗಳ ಆಹಾರ ಪದಾರ್ಥಗಳು. ಹಾಲು ಪ್ರಾಣಿ ಮೂಲದ ಶೀತಗುಣ ಹೊಂದಿದೆ, ಮತ್ತೊಂದೆಡೆ ಮಾವು ಸಿಹಿ ಮತ್ತು ಆಮ್ಲೀಯ ಸ್ವಭಾವದ್ದಾಗಿದೆ. ಇವೆರಡನ್ನು ಒಟ್ಟಿಗೆ ಮಿಕ್ಸ್ ಮಾಡಿ ಸೇವಿಸಿದ್ರೆ ಜೀರ್ಣಕ್ರಿಯೆಯಲ್ಲಿ ವ್ಯತಿರಿಕ್ತತೆ ಉಂಟಾಗುವ ಸಾಧ್ಯತೆ ಇದೆಯಂತೆ.

ಮಾವಿನ ಹಣ್ಣಿನೊಂದಿಗೆ ಹಾಲು ಮಿಕ್ಸ್ ಮಾಡಿ ಕುಡಿದ್ರೆ ಸಮಸ್ಯೆ ಏನು?

  • ಫುಡ್ ಪಾಯ್ಸನಿಂಗ್ ಅಪಾಯ: ಕೆಲವು ತಜ್ಞರ ಪ್ರಕಾರ, ಮಾವು ಮತ್ತು ಹಾಲು ಬೆರೆಸಿ ಕುಡಿಯುವುದರಿಂದ ಫುಡ್ ಪಾಯ್ಸನಿಂಗ್‌ನ ಸಾಧ್ಯತೆ ಹೆಚ್ಚಾಗುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆ, ವಾಂತಿ, ಹೊಟ್ಟೆನೋವುಗಳಿಗೆ ಕಾರಣವಾಗಬಹುದು.
  • ಚರ್ಮದ ಸಮಸ್ಯೆಗಳು: ಮಾವು-ಹಾಲು ಕಾಂಬೋ ಸೇವನೆಯಿಂದ ಮೊಡವೆ, ಚರ್ಮದ ಅಲರ್ಜಿ ಅಥವಾ ಇತರ ತ್ವಚಾ ಸಮಸ್ಯೆಗಳು ಉಂಟಾಗಬಹುದು. ಕೆಲವರಲ್ಲಿ ದದ್ದುಗಳಿಗೂ ಕಾರಣವಾಗಬಹುದು.
  • ಲ್ಯಾಕ್ಟೋಸ್ ಅಸಹಿಷ್ಣುತೆ: ಲ್ಯಾಕ್ಟೋಸ್ ಇನ್ ಟೊಲಾರೆಂಟ್ ಇರುವವರಿಗೆ ಇದು ಅಪಾಯಕಾರಿ. ಮಾವಿನ ಹಣ್ಣಿನ ಆಮ್ಲೀಯತೆಯು ಹಾಲಿನ ಲ್ಯಾಕ್ಟೋಸ್ ಜೀರ್ಣಕ್ರೀಯೆಗೆ ಅಡ್ಡಿ ಉಂಟುಮಾಡಬಹುದು. ಇದು ಹೊಟ್ಟೆ ಸೆಳೆತ ಅಥವಾ ಅತಿಸಾರಕ್ಕೆ ದಾರಿ ಮಾಡಬಹುದು.

Mango Lassi

ತಜ್ಞರ ಪ್ರಕಾರ, ಮಾವನ್ನು ಪ್ರತ್ಯೇಕವಾಗಿ ಜ್ಯೂಸ್ ಮಾಡಿ ಕುಡಿಯುವುದು ಉತ್ತಮ. ಮಿಲ್ಕ್ ಶೇಕ್ ಕುಡಿಯಲೇಬೇಕೆಂದಿದ್ದರೆ, ಹಾಲು ಚೆನ್ನಾಗಿ ಕುದಿಸಿ ತಣ್ಣಗಾಗಿಸಿ ಬಳಸಬೇಕು. ಅಥವಾ, ಬಾದಾಮಿ ಹಾಲು ಅಥವಾ ಓಟ್ಸ್ ಹಾಲು ಬಳಸಿದರೆ ಒಳ್ಳೆಯದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!