ಟೊಮೆಟೊ ಎಂಬುದು ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಕಾಣಸಿಗುವ ಸಾಮಾನ್ಯ ಪದಾರ್ಥ. ಇದರಲ್ಲಿ ವಿಟಮಿನ್ ಸಿ, ಲೈಕೋಪೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಂ ಮುಂತಾದ ಅಂಶಗಳು ಇದ್ದು, ಆರೋಗ್ಯಕ್ಕೆ ಉತ್ತಮ ಎನ್ನಲಾಗುತ್ತದೆ. ಆದರೆ ಟೊಮೆಟೊದ ಅತಿಯಾದ ಸೇವನೆ ದೇಹಕ್ಕೆ ಉಪಕಾರಕ್ಕಿಂತ ಅಪಾಯವನ್ನುಂಟುಮಾಡಬಹುದು ಎಂಬುದು ವೈದ್ಯಕೀಯವಾಗಿ ಸಾಬೀತಾಗಿದೆ. ಇದರ ಅತಿಸೇವನೆಯಿಂದ ಉಂಟಾಗುವ ಪ್ರಮುಖ ಆರೋಗ್ಯ ಸಮಸ್ಯೆಗಳು ಯಾವುವು ಗೊತ್ತ?
ಅತಿಸಾರ
ಟೊಮೆಟೊದಲ್ಲಿ ‘ಸಾಲ್ಮೊನೆಲ್ಲಾ’ ಎಂಬ ಬ್ಯಾಕ್ಟೀರಿಯಾ ಕಂಡುಬರುವ ಸಾಧ್ಯತೆ ಇದೆ. ಇದು ಅತಿಸಾರದ ಸಮಸ್ಯೆ ಉಂಟುಮಾಡಬಹುದು. ಹೀಗಾಗಿ ಅತಿಸಾರದ ಸಂದರ್ಭದಲ್ಲಿ ಟೊಮ್ಯಾಟೊ ಸೇವಿಸದಂತೆ ಸಲಹೆ ನೀಡಲಾಗಿದೆ.
ಅಸಿಡಿಟಿ ಮತ್ತು ಎದೆಯುರಿ
ಟೊಮೆಟೊ ಸ್ವಭಾವತಃ ಆಮ್ಲೀಯವಾಗಿರುವುದರಿಂದ ಹೊಟ್ಟೆಯಲ್ಲಿ ಆಸಿಡ್ ರಿಫ್ಲಕ್ಸ್ ಅಥವಾ ಗ್ಯಾಸ್ಟ್ರಿಕ್ ಉಂಟುಮಾಡಬಹುದು. ಹೆಚ್ಚು ತಿಂದರೆ ಎದೆಯುರಿ, ಬಾಯಲ್ಲಿ ಆಮ್ಲ ಶಾಖೆ ತರುವ ಸಮಸ್ಯೆಗಳು ಕಾಣಿಸಬಹುದು.
ಕೀಲು ನೋವು
ಟೊಮೆಟೊಗಳಲ್ಲಿ ‘ಸೊಲನೈನ್’ ಎಂಬ ಆಲ್ಕಲಾಯ್ಡ್ ಇದ್ದು, ಇದು ಕೆಲವವರಿಗೆ ಕೀಲುಗಳ ಊತ, ನೋವಿಗೆ ಕಾರಣವಾಗಬಹುದು.
ಮೂತ್ರಪಿಂಡದ ಕಲ್ಲುಗಳು (Kidney Stones)
ಟೊಮೆಟೊಗಳಲ್ಲಿ ‘ಕ್ಯಾಲ್ಸಿಯಂ ಆಕ್ಸಲೇಟ್’ ಅಂಶ ಹೆಚ್ಚು. ಇದು ದೇಹದಲ್ಲಿ ಸಂಗ್ರಹವಾಗುವ ಮೂಲಕ ಕಿಡ್ನಿ ಸ್ಟೋನ್‌ಗೆ ಕಾರಣವಾಗಬಹುದು. ಇದರಿಂದ ಮೂತ್ರದ ಸಮಸ್ಯೆಗಳು ಉಂಟಾಗಬಹುದು.
ಚರ್ಮದ ಅಲರ್ಜಿ
ಕೆಲವರಿಗೆ ಟೊಮೆಟೊ ಸೇವನೆಯಿಂದ ಚರ್ಮದ ಮೇಲೆ ಅಲರ್ಜಿ, ಕೆರೆತ, ಉರಿಯುವಿಕೆ, ಕೆಂಪು ದದ್ದುಗಳು ಕಾಣಬಹುದು. ಈ ಲಕ್ಷಣಗಳಿರುವವರು ಟೊಮೆಟೊ ಸೇವನೆಯನ್ನು ಕಡಿಮೆಮಾಡುವುದು ಸೂಕ್ತ.
ಟೊಮೆಟೊ ಆರೋಗ್ಯಕರವಾದರೂ, ಮಿತಿಯಾಗಿ ಸೇವಿಸಿದರೆ ಮಾತ್ರ ಅದರ ಪೋಷಕಾಂಶಗಳಿಂದ ಲಾಭ ಪಡೆಯಲು ಸಾಧ್ಯ. ಎಲ್ಲಾ ಬಗೆಯ ಆಹಾರವನ್ನೂ ಸಮತೋಲಿತವಾಗಿ ಸೇವಿಸುವುದು ದೀರ್ಘಕಾಲಿಕ ಆರೋಗ್ಯಕ್ಕೆ ಉತ್ತಮ ಹಾದಿ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)