ಭಾರತದಲ್ಲಿ ಗಣೇಶ ಚತುರ್ಥಿ ಉತ್ಸವವು ಧಾರ್ಮಿಕ ಭಕ್ತಿ ಮತ್ತು ವೈಭವದ ಸಂಕೇತವಾಗಿದೆ. ಪ್ರತಿವರ್ಷ ದೇಶದ ವಿವಿಧೆಡೆ ಅಲಂಕೃತ ಮೂರ್ತಿಗಳು ಸ್ಥಾಪನೆಗೊಳ್ಳುತ್ತವೆ. ಆದರೆ ಕೆಲವು ಮೂರ್ತಿಗಳು ಕೇವಲ ಭಕ್ತಿಯಲ್ಲದೇ, ಅದ್ಭುತ ಚಿನ್ನ-ಬೆಳ್ಳಿ ಆಭರಣಗಳಿಂದ ಕೂಡಿದ ಶ್ರೀಮಂತಿಕೆಯ ಪ್ರತೀಕವಾಗಿಯೂ ಪ್ರಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಅತ್ಯಂತ ಶ್ರೀಮಂತ 4 ಗಣಪತಿ ಮೂರ್ತಿಗಳ ಪಟ್ಟಿ ಇಲ್ಲಿದೆ ನೋಡಿ.
ಜಿಎಸ್‌ಬಿ ಸೇವಾ ಮಂಡಲ ಗಣಪತಿ –ಮುಂಬೈ
ಈ ಮೂರ್ತಿಗೆ 69 ಕೆಜಿ ಚಿನ್ನ ಮತ್ತು 336 ಕೆಜಿ ಬೆಳ್ಳಿ ಅಲಂಕಾರವಿದ್ದು, ಇದರ ಒಟ್ಟು ಮೌಲ್ಯ 300 ಕೋಟಿಗೂ ಹೆಚ್ಚು. ಭಕ್ತರ ಪ್ರೀತಿ ಮತ್ತು ಶ್ರೀಮಂತಿಕೆಯ ಸಂಕೇತವಾಗಿ ಇದು ಅಗ್ರ ಸ್ಥಾನದಲ್ಲಿದೆ.
ಲಾಲ್‌ಬಾಗ್ಚಾ ರಾಜಾ – ಮುಂಬೈ
“ನವಸಚಾ ಗಣೇಶ” (ನವಸಾಚಾ ಗಣೇಶ ಎಂದರೆ ಭಕ್ತರ ‘ನವಾಸ್’ (ಪ್ರತಿಜ್ಞೆ) ಅಥವಾ ಆಸೆಯನ್ನು ಈಡೇರಿಸುವ ಗಣೇಶ, ಎಂದರ್ಥ) ಎಂದು ಕರೆಯಲ್ಪಡುವ ಈ ಮೂರ್ತಿ ಮುಂಬೈನ ಜನರಿಗೆ ದೈವಸ್ವರೂಪ. ಕೋಟ್ಯಂತರ ಭಕ್ತರು ದರ್ಶನಕ್ಕಾಗಿ ಬರುವರು. ವೈಭವದ ಜೊತೆಗೆ ಅಸಂಖ್ಯಾತ ಭಕ್ತಿಯ ಸಂಕೇತವಾಗಿದೆ ಈ ಗಣಪ.
ಖೈರತಾಬಾದ್ ಗಣಪತಿ – ಹೈದರಾಬಾದ್
ಪ್ರತಿವರ್ಷ ಎತ್ತರ ಹೆಚ್ಚಿಸಿಕೊಂಡು ಬರುವ ಈ ಗಣಪತಿ ಮೂರ್ತಿಯು 2024ರಲ್ಲಿ 70 ಅಡಿ ಎತ್ತರ ತಲುಪಿದೆ. ಭಾರತದ ಅತಿ ಎತ್ತರದ ಗಣಪತಿ ಮೂರ್ತಿಗಳಲ್ಲಿ ಇದು ಪ್ರಮುಖವಾದದ್ದು.
ದಗ್ಡುಶೇಠ ಹಲ್ವಾಯಿ ಗಣಪತಿ – ಪುಣೆ
ಸುಮಾರು 40 ಕೆಜಿ ಚಿನ್ನದ ಆಭರಣ ಧರಿಸಿದ ಈ ಮೂರ್ತಿ ಪುಣೆಯಲ್ಲಿ ಪ್ರಸಿದ್ಧಿ ಪಡೆದಿದೆ. ಪುಣೆಯ ಪ್ರಸಿದ್ಧ ದೇವಾಲಯಗಳಲ್ಲಿ ಇದು ಅಗ್ರ ಸ್ಥಾನದಲ್ಲಿದೆ.
ಈ ಐದು ಗಣಪತಿಗಳು ಕೇವಲ ಧಾರ್ಮಿಕ ಮೂರ್ತಿಗಳಲ್ಲ, ಬದಲಾಗಿ ಭಕ್ತಿ, ವೈಭವ ಮತ್ತು ಸಾಮಾಜಿಕ ಏಕತೆಯ ಸಂಕೇತಗಳಾಗಿದ್ದಾರೆ. ಭಾರತದಲ್ಲಿ ಗಣೇಶ ಚತುರ್ಥಿ ಉತ್ಸವಕ್ಕೆ ಅಪ್ರತಿಮ ಔಜಸ್ಯ ನೀಡುವಲ್ಲಿ ಇವುಗಳ ಪಾತ್ರ ಅತ್ಯಂತ ಮಹತ್ತರವಾಗಿದೆ.