ನಾವು ನೀರಿನಲ್ಲಿ ಹೆಚ್ಚು ಸಮಯ ಕಳೆದಾಗ, ಕೈ ಮತ್ತು ಕಾಲುಗಳ ಬೆರಳುಗಳು ಸುಕ್ಕುಗಟ್ಟುವ ಅನುಭವವ ಬಹುತೇಕ ಎಲ್ಲರಿಗೂ ಆಗಿರುತ್ತೆ. ಇದು ಶರೀರದ ತ್ವಚೆಯಲ್ಲಿ ನಡೆಯುವ ಒಂದು ಸಹಜ ಕ್ರಿಯೆಯಾಗಿದೆ, ಆದರೆ ಇದರ ಹಿಂದಿರುವ ವೈಜ್ಞಾನಿಕ ಕಾರಣ ನಿಮಗೆ ಗೊತ್ತಾ?.
ಇದರ ಹಿಂದಿನ ಕಾರಣವೆಂದರೆ ನಮ್ಮ ಚರ್ಮವು ನೀರಿನಿಂದ ರಕ್ಷಿಸಿಕೊಳ್ಳಲು ದೇಹದಲ್ಲಿ ಒಂದು ರೀತಿಯ ನೈಸರ್ಗಿಕ ಜೆಲ್ ಉತ್ಪತ್ತಿಯಾಗುತ್ತೆ. ಈ ಜೆಲ್ ದೇಹವು ತಣ್ಣನೆಯ ಸಂದರ್ಭದಲ್ಲಿ ರಕ್ಷಿಸಿಕೊಳ್ಳಲು ಸಹಕಾರಿಯಾಗುತ್ತದೆ. ಕೆಲವೊಮ್ಮೆ ಈ ಜೆಲ್ ದುರ್ಬಲಗೊಂಡಾಗ ನೀರು ಚರ್ಮಕ್ಕೆ ಹೀರಲ್ಪಡುತ್ತದೆ ಮತ್ತು ಚರ್ಮವು ಸುಕ್ಕುಗಟ್ಟುತ್ತದೆ.
ಕೈ ಮತ್ತು ಪಾದಗಳ ಮೇಲೆ ಸುಕ್ಕುಗಳು ಸಾಮಾನ್ಯ ಘಟನೆಯಂತೆ ಕಂಡುಬಂದರೂ, ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಸೂಕ್ತವಲ್ಲ. ಸುಕ್ಕುಗಳು ದೀರ್ಘಕಾಲದವರೆಗೆ ಇದ್ದರೆ, ಚರ್ಮವು ಒಣಗುವ ಅಪಾಯ ಹೆಚ್ಚಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ಶುಷ್ಕತೆಯು ಚರ್ಮದ ಅಲರ್ಜಿಯನ್ನು ಸಹ ಉಂಟುಮಾಡಬಹುದು.