ಈ ಅಸ್ತವ್ಯಸ್ತ ಬದುಕಿನಲ್ಲಿ ಸ್ವಲ್ಪ ಒತ್ತಡ ಕಡಿಮೆಯಾಗಿ, ನೆಚ್ಚಿನವರ ಜೊತೆ ಹೃದಯಪೂರ್ವಕವಾಗಿ ಸಮಯ ಕಳೆಯಲು ಪಿಕ್ನಿಕ್ ಒಂದು ಅದ್ಭುತ ಆಯ್ಕೆ. ಮನೆಯವರ ಜೊತೆ, ಸ್ನೇಹಿತರ ಜೊತೆ, ಸಹಚರರ ಜೊತೆ ಪ್ರಕೃತಿಯ ಮಧ್ಯೆ ಕೂತು ಮಾತನಾಡೋದು, ತಿನ್ನೋದು, ಆಟವಾಡೋದು ಎಷ್ಟು ಮಜಾ ಕೊಡುತ್ತೆ ಅಲ್ವಾ?
ಆದರೆ ಈ ಪಿಕ್ನಿಕ್ ಅನ್ನೋ ಕಾನ್ಸೆಪ್ಟ್ ಶುರುವಾದದ್ದು ಹೇಗೆ? ಹಿಂದಿರುವ ಇತಿಹಾಸ, ಅದರ ಮಹತ್ವ ಹಾಗೂ ಇದನ್ನು ಹೇಗೆ ಆಚರಿಸಬಹುದು ಎಂಬುದನ್ನು ತಿಳಿಯೋಣ.
ಪಿಕ್ನಿಕ್ ದಿನದ ಇತಿಹಾಸ ಏನು ಹೇಳುತ್ತೆ?
‘ಪಿಕ್ನಿಕ್’ ಪದವು ಫ್ರೆಂಚ್ ಪದ ‘ಪಿಕ್-ನಿಕ್’ ಇಂದ ಬಂದಿದೆ. ಇದರ ಅರ್ಥ ಎಲ್ಲರೂ ಒಂದೆಡೆ ಸೇರಿ ತಮ್ಮ ತಿನ್ನುವ ವಸ್ತುಗಳನ್ನು ಹಂಚಿಕೊಳ್ಳುವುದು. ಒಂದು ರೀತಿಯ ಸಾಮಾಜಿಕ ಊಟದ ಕಾರ್ಯಕ್ರಮ ಎಂದರ್ಥ. ಪಿಕ್ನಿಕ್ ಇತಿಹಾಸ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲವಾದರೂ, ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಪಿಕ್ನಿಕ್‌ಗಳು ಒಂದು ರೀತಿಯ ಅನೌಪಚಾರಿಕ ಊಟದ ಕಾರ್ಯಕ್ರವಾಗಿ ಪ್ರಾರಂಭವಾಯಿತು ಎಂದು ನಂಬಲಾಗಿದೆ.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪೋರ್ಚುಗಲ್‌ನಲ್ಲಿ ನಡೆದ ಪಿಕ್ನಿಕ್ ಅನ್ನು ಅತಿದೊಡ್ಡ ಪಿಕ್ನಿಕ್ ಎಂದು ದಾಖಲಿಸಿದೆ. ಆ ಕಾರ್ಯಕ್ರಮದಲ್ಲಿ ಸುಮಾರು 20,000 ಜನರು ಭಾಗವಹಿಸಿದ್ದರು.
ಪಿಕ್ನಿಕ್ ಅನ್ನೋದು ಕೇವಲ ತಿಂದು -ಕುಡಿಯುವುದಲ್ಲ. ಇದು ಕುಟುಂಬ, ಸ್ನೇಹ, ಸಮಯ ಮತ್ತು ನೆನಪುಗಳ ಬುತ್ತಿ. ನಿಮ್ಮ ನಿತ್ಯದ ಒತ್ತಡದಿಂದ ಹೊರಬಂದು, ಪ್ರಕೃತಿಯೊಂದಿಗೆ ಬೆರೆತು, ನವಚೈತನ್ಯವನ್ನು ಪಡೆಯೋ ಅವಕಾಶ ಇದು. ಜೊತೆಗೆ ಪ್ರೀತಿಪಾತ್ರರೊಂದಿಗೆ ಮಾತುಕತೆ, ನಗು, ಹಾಸ್ಯಗಳು ಹೊಸ ಶಕ್ತಿ ತುಂಬುತ್ತವೆ.