ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ 10 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ‘ಜೈಲರ್’ ಸಿನಿಮಾ ರಿಲೀಸ್ ಆದ ಮೊದಲ ದಿನದಿಂದಲೂ ಪಾಸಿಟಿವ್ ಟಾಕ್ ಪಡೆದುಕೊಂಡಿದೆ. ಎಂದಿನಂತೆ ರಜನಿಕಾಂತ್ ತಮ್ಮ ಸ್ಟೈಲ್, ಲುಕ್ ಮತ್ತು ಡೈಲಾಗ್ಗಳಿಂದ ಅಭಿಮಾನಿಗಳನ್ನು ಸೆಳೆದಿದ್ದಾರೆ.
ಈ ಸಿನಿಮಾದ ಕಲೆಕ್ಷನ್ಸ್ ವಿಶ್ವಾದ್ಯಂತ 90 ಕೋಟಿಗೂ ಹೆಚ್ಚು ಗ್ರಾಸ್ ಓಪನಿಂಗ್ಸ್ ಪಡೆದಿತ್ತು. ಸುಮಾರು 7 ವರ್ಷಗಳ ನಂತರ ರಜನಿಕಾಂತ್ ಸಿನಿಮಾ ಒಂದು ರೇಂಜ್ ನಲ್ಲಿ ಬಾಕ್ಸ್ ಆಫೀಸ್ ಅಲ್ಲಾಡಿಸಿದೆ.
ರಜನಿಕಾಂತ್ ಅವರ 2.0 ಸಿನಿಮಾ ನಾಲ್ಕು ದಿನಗಳಲ್ಲಿ 400 ಕೋಟಿ ಗಳಿಸಿತ್ತು. ಇದೀಗ ‘ಜೈಲರ್’ 4 ದಿನದಲ್ಲಿ 300 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ವಿಶ್ವದಾದ್ಯಂತ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ತಮಿಳು ಸಿನಿಮಾವಾಗಿದೆ. ಇದೀಗ 5ನೇ ದಿನದ ಜೈಲರ್ ಸಿನಿಮಾ ದೇಶದಾದ್ಯಂತ 50 ಕೋಟಿ ಕಲೆಕ್ಷನ್ ಮಾಡಿದೆ.