ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ IPL ಟೂರ್ನಿಯಲ್ಲಿ ಆಟಗಾರರಷ್ಟೇ ಅಲ್ಲ, ಅಂಪೈರ್ಗಳಿಗೂ ಭರ್ಜರಿ ಸಂಬಳ ಸಿಗುತ್ತತ್ತೆ. ಈ ಬಾರಿ ಐಪಿಎಲ್ 2026 ಆರಂಭಕ್ಕೂ ಮುನ್ನ ಅಂಪೈರ್ಗಳ ವೇತನದ ವಿಷಯ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಐಪಿಎಲ್ ಪಂದ್ಯಗಳಲ್ಲಿ ಮೈದಾನದಲ್ಲಿ ಕಾರ್ಯನಿರ್ವಹಿಸುವ ಆನ್ಫೀಲ್ಡ್ ಅಂಪೈರ್ಗಳಿಗೆ ಪ್ರತಿ ಮ್ಯಾಚ್ಗೆ ಸುಮಾರು ₹3 ಲಕ್ಷ ನೀಡಲಾಗುತ್ತದೆ. ನಾಲ್ಕನೇ ಅಂಪೈರ್ ಹಾಗೂ ಟಿವಿ/ಮೂರನೇ ಅಂಪೈರ್ ₹2 ಲಕ್ಷದಷ್ಟು ಸಂಬಳ ಸಿಗುತ್ತದೆ. ಐಸಿಸಿ ಎಲೈಟ್ ಪ್ಯಾನಲ್ನ ಅಂಪೈರ್ಗಳು ₹3.7 ಲಕ್ಷವರೆಗೆ ಪಡೆಯುತ್ತಾರೆ. ಒಟ್ಟು ಒಂದು ಸೀಸನ್ನಲ್ಲಿ 12ರಿಂದ 14 ಪಂದ್ಯಗಳನ್ನು ನಿರ್ವಹಿಸಿದರೆ ₹24 ಲಕ್ಷದಿಂದ ₹45 ಲಕ್ಷವರೆಗೆ ಆದಾಯ ಗಳಿಸುತ್ತಾರೆ.
ಇದನ್ನೂ ಓದಿ:
ಇದಕ್ಕೆ ವಿರುದ್ಧವಾಗಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅಂಪೈರ್ಗಳಿಗೆ ಪ್ರತಿ ಪಂದ್ಯಕ್ಕೆ ₹1.13 ಲಕ್ಷದಿಂದ ₹1.25 ಲಕ್ಷವರೆಗೆ ಮಾತ್ರ ಸಿಗುತ್ತದೆ. ಅಂದರೆ ಐಪಿಎಲ್ ಸಂಬಳವು 2-3 ಪಟ್ಟು ಹೆಚ್ಚು.
ಐಪಿಎಲ್ ದೊಡ್ಡ ಬಿಸಿನೆಸ್ ಲೀಗ್ ಆಗಿರುವುದರಿಂದ ಪ್ರಸಾರ ಹಕ್ಕುಗಳು, ಸ್ಪಾನ್ಸರ್ಶಿಪ್ಗಳಿಂದ ಭಾರೀ ಆದಾಯ ಬರುತ್ತದೆ. ಜೊತೆಗೆ ಪ್ರತಿ ನಿರ್ಧಾರಕ್ಕೂ ಭಾರಿ ಒತ್ತಡ ಇರುವುದರಿಂದ, ಗುಣಮಟ್ಟದ ಅಂಪೈರ್ಗಳನ್ನು ಸೆಳೆಯಲು ಹೆಚ್ಚಿನ ವೇತನ ನೀಡಲಾಗುತ್ತಿದೆ.



