Sunday, November 2, 2025

SNACKS | ಮನೆಯಲ್ಲೇ ಸಿಂಪಲ್‌ ಆದ ಗೋಬಿಮಂಚೂರಿ ಮಾಡ್ಬೋದು ಗೊತ್ತಾ?

ಮಾಡುವ ವಿಧಾನ

ಮೊದಲು ಅರಿಶಿಣ ಉಪ್ಪು ಹಾಕಿದ ನೀರಿಗೆ ಹೂ ಕೋಸನ್ನು ಕತ್ತರಿಸಿ ನೆನೆಯಲು ಹಾಕಿಬಿಡಿ
ನಂತರ ಕೋಸಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಕಾರ್ನ್‌ಫ್ಲೋರ್‌, ಉಪ್ಪು, ಖಾರದಪುಡಿ ಹಾಗೂ ನೀರು ಹಾಕಿ ಮಿಕ್ಸ್‌ ಮಾಡಿಕೊಳ್ಳಿ
ಕಾದ ಎಣ್ಣೆಗೆ ಈ ಗೋಬಿಯನ್ನು ಹಾಕಿ ಕರಿದು ಇಟ್ಟುಕೊಳ್ಳಿ

ನಂತರ ಬೌಲ್‌ಗೆ ಟೊಮ್ಯಾಟೊ ಕೆಚಪ್‌, ಸೋಯಾಸಾಸ್‌, ಚಿಲ್ಲಿ ಸಾಸ್‌ ಹಾಕಿ, ಇನ್ನೊಂದು ಬೌಲ್‌ಗೆ ಕಾರ್ನ್‌ಫ್ಲೋರ್‌ ಹಾಗೂ ನೀರನ್ನು ಹಾಕಿ ಮಿಕ್ಸ್‌ ಮಾಡಿ ಇಟ್ಟುಕೊಳ್ಳಿ

ನಂತರ ಪ್ಯಾನ್‌ಗೆ ಎಣ್ಣೆ ಕ್ಯಾಪ್ಸಿಕಂ, ಈರುಳ್ಳಿ ಹಾಕಿ, ನಂತರ ಹಸಿಮೆಣಸಿನ ಪೇಸ್ಟ್‌ ಹಾಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ.

ನಂತರ ಉಪ್ಪು, ಗರಂ ಮಸಾಲಾ ಹಾಕಿ, ಕಾರ್ನ್‌ಫ್ಲೋರ್‌ ನೀರನ್ನು ಹಾಕಿ ಮಿಕ್ಸ್‌ ಮಾಡಿ ಕೆಚಪ್‌ ನೀರು ಕೂಡ ಹಾಕಿ
ನಂತರ ಕರಿದ ಗೋಬಿ ಹಾಕಿ, ಚೆನ್ನಾಗಿ ಮಿಕ್ಸ್‌ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ಗೋಬಿ ರೆಡಿ

error: Content is protected !!