ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣ್ಯಭೂಮಿ ಅಯೋಧ್ಯೆಯಲ್ಲಿ ದೈವಕಳೆ ಎದ್ದು ಕಾಣಿಸುತ್ತಿದೆ. ಅಯೋಧ್ಯೆಗೆ ಬಂದು ಶ್ರೀರಾಮಲಲಾನ ಮೂರ್ತಿಗೆ ಕೈ ಮುಗಿಯಬೇಕೆಂದು ಲಕ್ಷಾಂತರ ಭಕ್ತರು ಆಶಿಸಿದ್ದಾರೆ.
ಮೊದಲ ದಿನವೇ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ರಾಮಲಲಾ ದರುಶನ ಪಡೆದು ಧನ್ಯರಾಗಿದ್ದಾರೆ. ಮೊದಲ ದಿನವೇ ಮೂರು ಲಕ್ಷ ಭಕ್ತರು ಬಂದರೆ ವರ್ಷಕ್ಕೆ ಎಷ್ಟು ಭಕ್ತರಾಗಬಹುದು? ಭಕ್ತರ ಭೇಟಿ ವಿಚಾರದಲ್ಲಿ ಮೆಕ್ಕಾ ಹಾಗೂ ವ್ಯಾಟಿಕನ್ ಸಿಟಿಯನ್ನೇ ಹಿಂದಿಕ್ಕುವ ಎಲ್ಲಾ ಸಾಧ್ಯತೆಗಳಿವೆ.
ಮೆಕ್ಕಾ, ವ್ಯಾಟಿಕನ್ ನಗರಕ್ಕೆ ವಾರ್ಷಿಕವಾಗಿ ಸುಮಾರು ಮೂರು ಕೋಟಿ ಜನರು ಭೇಟಿ ನೀಡುತ್ತಾರೆ. ಅಯೋಧ್ಯೆಗೆ ವಾರ್ಷಿವಾಗಿ 3-5 ಐದು ಕೋಟಿ ಭಕ್ತರು ಆಗಮಿಸುವ ಸಾಧ್ಯತೆ ಇದೆ.
ದಿನಕ್ಕೆ 1-2 ಲಕ್ಷ ಮಂದಿ ರಾಮಲಲಾ ದೇಗುಲಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ನಮ್ಮ ದೇಶದಲ್ಲಷ್ಟೇ ಅಲ್ಲದೇ ಬೇರೆ ದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ. ಅಯೋಧ್ಯೆಯಲ್ಲಿ ವಾರ್ಷಿಕವಾಗಿ 55 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯುವ ನಿರೀಕ್ಷೆ ಇದೆ. ಹೊಟೇಲ್, ಸಾರಿಗೆ, ಪ್ರವಾಸೋದ್ಯಮ, ವಸತಿ ಹಾಗೂ ಇನ್ನಿತರ ವಹಿವಾಟುಗಳು ಹೆಚ್ಚು ನಡೆಯುವ ಸಾಧ್ಯತೆ ಇದೆ.