ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗ್ಗೆ ಎಂಟಕ್ಕೆ ಮನೆಬಿಟ್ಟು ರಾತ್ರಿ ಎಂಟಕ್ಕೆ ಮನೆಗೆ ಬರ್ತೀರಿ, ಫ್ರೆಶ್ ಅಪ್ ಆಗಿ ಊಟ ಮಾಡಿ ನೀರು ಕುಡಿಯುವಷ್ಟ್ರಲ್ಲಿ ಗಂಟೆ ಹತ್ತಾಗಿರುತ್ತದೆ. ವಾರವಿಡೀ ಇದೇ ರೊಟೀನ್ ಆದರೆ ಫ್ಯಾಮಿಲಿ ಟೈಮ್ ಕೊಡೋದು ಯಾವಾಗ?
ಇದಕ್ಕೆಲ್ಲಾ ಒಂದು ಸೊಲ್ಯೂಷನ್ ಇದೆ. ನಿಮ್ಮ ಆಫೀಸಿನ ಕಲೀಗ್‌ನ್ನೇ ಲವ್ ಮಾಡಿ ಮದುವೆಯಾಗಿ ಎನ್ನುವ ಪೋಸ್ಟ್ ಒಂದು ವೈರಲ್ ಆಗಿದೆ. ಬೆಂಗಳೂರು ಮೂಲದ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಹರ್ಷಿತ್ ಮಹಾವರ್ ಎಂಬವರು ವರ್ಕ್-ಲೈಫ್ ಬ್ಯಾಲೆನ್ಸ್ ಮಾಡಲು ಕ್ರೇಜಿ ಟಿಪ್ಸ್ ನೀಡಿದ್ದಾರೆ. ಇಂದಿನ ಕಾಲಘಟ್ಟದಲ್ಲಿನ ಕೆಲಸದ ಒತ್ತಡದಿಂದಾಗಿ ಕುಟುಂಬದೊಂದಿಗೆ ಮಾತನಾಡಲು ಕೂಡಾ ಸಮಯ ಸಿಗುತ್ತಿಲ್ಲ. ಇದಕ್ಕೆ ಪರಿಹಾರ ಏನಂದ್ರೆ ನೀವು ನಿಮ್ಮ ಸಹದ್ಯೋಗಿಯನ್ನೇ ಮದುವೆಯಾಗಿ, ಇದರಿಂದ ಹಲವಾರು ಪ್ರಯೋಜನಗಳು ಕೂಡ ಇದೆ ಎಂದು ಹೇಳಿಕೊಂಡಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು ಹರ್ಷಿತ್ ತನ್ನ ಲಿಂಕ್ಡ್‌ಇನ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೆಲಸದ ಒತ್ತಡದಿಂದಾಗಿ ಕುಟುಂಬದೊಂದಿಗೆ ಮಾತನಾಡಲು ಸಮಯ ಸಿಕ್ತಿಲ್ಲ, ಕೆಲಸ ಬೇಡ ಎಂದು ಬಿಟ್ರೆ ಕುಟುಂಬ ನಮ್ಮೊಂದಿಗೆ ಮಾತನಾಡಲ್ಲ. ಇಂತಹ ಪರಿಸ್ಥಿತಿಯಲ್ಲಿ ವರ್ಕ್‌ಲೈಫ್ ಬ್ಯಾಲೆನ್ಸ್‌ಗೆ ನನ್ನ ಕಡೆಯ ಪರಿಹಾರ ಏನಂದ್ರೆ ನೀವು ನಿಮ್ಮ ಸಹದ್ಯೋಗಿಯನ್ನೇ ಮದುವೆಯಾಗಿ. ಇದರಿಂದ ಹಲವಾರು ಪ್ರಯೋಜನಗಳು ಕೂಡಾ ಇವೆ, ಕ್ಯಾಬ್ ವೆಚ್ಚ ಅರ್ಧದಷ್ಟು ಕಡಿಮೆಯಾಗುತ್ತದೆ, ಕೆಲಸದ ಸ್ಥಳಗಳಲ್ಲಿ ಆಗುವಂತಹ ವಿವಾಹೇತರ ಸಂಬಂಧಗಳಿಗೆ ಅವಕಾಶ ಇರುವುದಿಲ್ಲ ಎಂದು ಕೆಲವೊಂದು ವರ್ಕ್ ಲೈಫ್ ಬ್ಯಾಲೆನ್ಸ್‌ಗಾಗಿ ಕೆಲವೊಂದು ತಮಾಷೆಯ ಟಿಪ್ಸ್ ನೀಡಿದ್ದಾರೆ.