ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ವರುಣನ ಅಬ್ಬರಕ್ಕೆ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು, ಇತ್ತ ಪ್ರವಾಹದಿಂದಾಗಿ ನೋಯ್ಡಾದಲ್ಲಿ (Noida) ಸಿಲುಕಿರುವ ಪ್ರಾಣಿಗಳನ್ನು ವಿಪತ್ತು ನಿರ್ವಹಣಾ ತಂಡಗಳು ರಕ್ಷಿಸಿವೆ.
ಈ ರೀತಿ ರಕ್ಷಿಸಿದ ಪ್ರಾಣಿಗಳ ಒಂದಾದ ‘ಪ್ರೀತಂ’ ಎಂಬ ಗೂಳಿಯೂ ಒಂದು. ಇದೀಗ ಇದರ ಕುರಿತು ಬಾರಿ ಚರ್ಚೆ ಆಗುತ್ತಿದೆ. ಕಾರಣ ಅದ್ರ ಬೆಲೆ 1 ಕೋಟಿ ರೂಪಾಯಿ.
ಹೌದು, ಗಾಜಿಯಾಬಾದ್ನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) 8 ನೇ ಬೆಟಾಲಿಯನ್, ತಂಡ ನೋಯ್ಡಾದಿಂದ ಭಾರತದ ನಂ.1 ಗೂಳಿ, 1 ಕೋಟಿ ರೂಪಾಯಿ ಬೆಲೆಬಾಳುವ ‘ಪ್ರೀತಮ್’ಸೇರಿದಂತೆ 3 ಜಾನುವಾರುಗಳನ್ನು ರಕ್ಷಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜೀವ ಉಳಿಸಲು ನಮ್ಮ ತಂಡಗಳು ಶ್ರಮಿಸುತ್ತಿವೆ ಎಂದು ರಕ್ಷಣಾ ತಂಡ ಜಾನುವಾರು ಮತ್ತು ಮೇಕೆಗಳನ್ನು ರಕ್ಷಿಸುವ ಫೋಟೋಗಳು ಮತ್ತು ವಿಡಿಯೊಗಳನ್ನು ಟ್ವೀಟ್ ಮಾಡಿದೆ.
ನೋಯ್ಡಾದಲ್ಲಿ ನದಿಯ ದಡದಲ್ಲಿ ಸುಮಾರು 550 ಹೆಕ್ಟೇರ್ ಭೂಮಿಯನ್ನು ಮುಳುಗಿದ್ದು,. 5,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ ಮತ್ತು ಎಂಟು ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ . ದನ, ನಾಯಿ, ಮೊಲ, ಬಾತುಕೋಳಿ, ಹುಂಜ ಮತ್ತು ಗಿನಿಪಿಗ್ ಸೇರಿದಂತೆ ಸುಮಾರು 6,000 ಪ್ರಾಣಿಗಳನ್ನು ಸಹ ಮುಳುಗಿರುವ ಪ್ರದೇಶಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿರುವ ಯಮುನಾ ನದಿಯ ನೀರಿನ ಮಟ್ಟವು ಇಂದು 207.68 ಮೀಟರ್ಗೆ ಇಳಿದಿದ್ದರೂ ಅಪಾಯದ ಗಡಿಯಿಂದ ಇದು ಇನ್ನೂ ಎರಡು ಮೀಟರ್ ಮೇಲಿದೆ.