‘ಲಕ್ಷ್ಮಿ ನಿವಾಸ’ದಿಂದ ಬ್ರೇಕ್ ತಗೆದುಕೊಂಡ ‘ಲಕ್ಷ್ಮಿ’! ಪೋಸ್ಟ್‌ನಲ್ಲಿ ನಟಿ ಕೊಟ್ಟ ಕಾರಣವೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಪ್ರೇಕ್ಷಕರಿಗೆ ಭಾಳ ಅಚ್ಚುಮೆಚ್ಚು. ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿಯೊಬ್ಬರು ಶಾಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ.

ಹೌದು, ‘ಲಕ್ಷ್ಮೀ ನಿವಾಸ’ದ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದ ಶ್ವೇತಾ ಇನ್ನು ಮುಂದಿಗೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲ್ಲ ಅಂತ ಖುದ್ದಾಗಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಶ್ವೇತಾ ನೀಡಿದ ಮಾಹಿತಿ ಪ್ರಕಾರ, ವೈಯಕ್ತಿಕ ಕಾರಣಗಳು ಮತ್ತು ತಾಯಿಯ ಆರೋಗ್ಯ ಸಮಸ್ಯೆಯಿಂದಾಗಿ ಅವರು ಧಾರಾವಾಹಿಗೆ ವಿರಾಮ ನೀಡುತ್ತಿದ್ದಾರೆ ಅಂತ ತಿಳಿಸಿದ್ದಾರೆ.

“ನಾನೀಗ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ, ಜೀ ಕನ್ನಡದವರಿಗೆ ಹಾಗೂ ಪ್ರೇಕ್ಷಕರಿಗೆ ತುಂಬಾ ಧನ್ಯವಾದಗಳು. ಸೆಟ್‌ನಲ್ಲಿದ್ದ ಕೆಲವರನ್ನು ನಾನ್‌ ಮಿಸ್ ಮಾಡ್ತೀನಿ. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಮತ್ತೆ ಭೇಟಿಯಾಗ್ತೀನಿ,” ಅಂತ ಶ್ವೇತಾ ಭಾವುಕವಾಗಿ ಬರೆದುಕೊಂಡಿದ್ದಾರೆ.

ಶ್ವೇತಾ ಅವರು ಚೈತ್ರದ ಪ್ರೇಮಾಂಜಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ನಂತರ ಗೆಜ್ಜೆನಾದ, ಮುದ್ದಿನ ಅಳಿಯ, ಹೆತ್ತವರು ಮತ್ತು ಕೋಟಿಗೊಬ್ಬ ಹೀಗೆ ಹಲವಾರು ಚಿತ್ರಗಳಲ್ಲಿ ಮಿಂಚಿದವರು. ಅವರ ‘ಲಕ್ಷ್ಮೀ’ ಪಾತ್ರಕ್ಕೆ ಜನ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಈ ನಿರೀಕ್ಷೆಯ ನಡುವೆಯೇ ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡಿರುವ ಸುದ್ದಿ ಕೇಳಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

 

View this post on Instagram

 

A post shared by Lakshmi K R (@vinodhini_swetha)

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!