ಭಾರತದ ಜೀವಜಾಲ ಎಂದು ಕರೆಯಲ್ಪಡುವ ರೈಲ್ವೆಯಲ್ಲಿ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಅನೇಕ ವಿಶೇಷತೆಗಳನ್ನು ಹೊಂದಿರುವ ಭಾರತೀಯ ರೈಲ್ವೆಯು ಹಲವು ನಿಲ್ದಾಣಗಳ ಮೂಲಕ ತನ್ನ ವಿಶಿಷ್ಟತೆ ತೋರಿಸಿಕೊಡುತ್ತಿದೆ. ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಕಾಂಚೌಸಿ ರೈಲು ನಿಲ್ದಾಣ ಅಂಥದೇ ಒಂದು ವಿಶಿಷ್ಟತೆಯ ಉದಾಹರಣೆ.
ಈ ನಿಲ್ದಾಣದ ಮುಖ್ಯ ವೈಶಿಷ್ಟ್ಯವೇನೆಂದರೆ, ಇದು ಎರಡು ಜಿಲ್ಲೆಗಳ ಗಡಿಯಲ್ಲಿ ಸ್ಥಿತವಾಗಿದೆ. ಪ್ಲಾಟ್‌ಫಾರಂನ ಒಂದು ಭಾಗ ಕಾನ್ಪುರ ದೇಹತ್ ಜಿಲ್ಲೆಯಲ್ಲಿ ಇರುವಾಗ, ಇನ್ನೊಂದು ಭಾಗ ಔರೈಯಾ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಪರಿಣಾಮ ಬರುವ ಪ್ರತಿಯೊಂದು ರೈಲು ಎರಡೂ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಿಲ್ಲುತ್ತಿರುವಂತೆ ಆಗುತ್ತದೆ.
ರೈಲು ನಿಲ್ದಾಣದ ಆಡಳಿತ ಕಾನ್ಪುರದ ಪಾಲಿಗೆ
ಕಾಂಚೌಸಿ ನಿಲ್ದಾಣದ ಆಡಳಿತಾತ್ಮಕ ಕಚೇರಿ ಕಾನ್ಪುರ ದೇಹತ್ ಜಿಲ್ಲೆಯಲ್ಲಿ ಇದ್ದರೂ, ನಿಲ್ದಾಣದ ಇನ್ನೊಂದು ತುದಿ ಔರೈಯಾ ಗಡಿಗೆ ಸೇರುತ್ತದೆ. ಪ್ರಾರಂಭದಲ್ಲಿ ಈ ನಿಲ್ದಾಣವನ್ನು ಸಣ್ಣ ಪ್ರಮಾಣದ ಪ್ಯಾಸೆಂಜರ್ ರೈಲುಗಳು ಮಾತ್ರ ಬಳಸುತ್ತಿದ್ದರೆ, ಈಗ ಫರಕ್ಕಾ ಎಕ್ಸ್‌ಪ್ರೆಸ್ ಸೇರಿದಂತೆ ಕೆಲವು ಎಕ್ಸ್‌ಪ್ರೆಸ್ ರೈಲುಗಳು ಸಹ ಇಲ್ಲಿ ನಿಲ್ಲುತ್ತವೆ.
ಈ ವೈಶಿಷ್ಟ್ಯತೆಯಿಂದಾಗಿ ಈ ನಿಲ್ದಾಣದ ಫೋಟೋಗಳು ಮತ್ತು ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವಿಶೇಷ ಗಮನ ಸೆಳೆದಿವೆ.
ಉತ್ತರ ಪ್ರದೇಶದಲ್ಲಿ ಅತಿದೊಡ್ಡ ರೈಲು ಜಾಲ
ಭಾರತೀಯ ರೈಲ್ವೆ ಏಷ್ಯಾದಲ್ಲಿ ಎರಡನೇ ಅತಿದೊಡ್ಡ ರೈಲು ಜಾಲವಾಗಿದ್ದು, ಉತ್ತರ ಪ್ರದೇಶ ಈ ಜಾಲದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸುಮಾರು 9077 ಕಿ.ಮೀ ಉದ್ದದ ರೈಲು ಮಾರ್ಗವು ಈ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಪ್ರಯಾಣಿಕರು ಪ್ರತಿದಿನ ರೈಲು ಸೇವೆಗಳನ್ನು ಬಳಸುತ್ತಿದ್ದಾರೆ.
ಕಾಂಚೌಸಿಯಂತಹ ವಿಶಿಷ್ಟ ನಿಲ್ದಾಣಗಳು ಭಾರತೀಯ ರೈಲ್ವೆ ವ್ಯವಸ್ಥೆಯ ವೈವಿಧ್ಯತೆ ಮತ್ತು ಸವಾಲುಗಳನ್ನು ಪ್ರತಿಬಿಂಬಿಸುತ್ತವೆ. ಇದು ರೈಲ್ವೆ ಜಾಲವನ್ನು ನೊಡುತ್ತಿರುವವರಿಗಾಗಿ ಭಿನ್ನ ಅನುಭವವನ್ನು ನೀಡುವಲ್ಲಿ ಸಹಾಯ ಮಾಡುತ್ತದೆ.