Do You Know | ಈ ಬಣ್ಣದ ಬಟ್ಟೆ ಧರಿಸಿದ್ರೆ ಸೊಳ್ಳೆ ಕಚ್ಚೋದಿಲ್ವಂತೆ! ನೀವೂ ಒಮ್ಮೆ ಟ್ರೈ ಮಾಡಿ ನೋಡಿ

ಮಳೆಗಾಲ ಶುರುವಾಗುತ್ತಿದ್ದಂತೆ ಸೊಳ್ಳೆಗಳ ಓಡಾಟನೂ ಜೋರಾಗುತ್ತೆ. ಅನೇಕ ಪ್ರದೇಶಗಳಲ್ಲಿ ನಿಂತ ನೀರಿನಿಂದಾಗಿ ಸೊಳ್ಳೆಗಳ ಅಭಿವೃದ್ದಿ ವೇಗವಾಗಿ ನಡೆಯುತ್ತಿದ್ದು, ಇದರಿಂದ ಮಲೇರಿಯಾ, ಡೆಂಗ್ಯೂ, ಚಿಕೂನ್‌ಗುನ್ಯಾ ಮುಂತಾದ ವೈರಲ್ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಈ ರೋಗಗಳು ಕೆಲವೊಮ್ಮೆ ಜೀವಕ್ಕೂ ಅಪಾಯವನ್ನುಂಟು ಮಾಡಬಹುದು. ಹೀಗಾಗಿ ಆರೋಗ್ಯ ಇಲಾಖೆ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲು ನಿರಂತರ ಎಚ್ಚರಿಕೆ ನೀಡುತ್ತದೆ.

ಸೊಳ್ಳೆಗಳು ಯಾವ ಬಟ್ಟೆಗಳತ್ತ ಹೆಚ್ಚು ಆಕರ್ಷಿತವಾಗುತ್ತವೆ?

ಖಾರ್ಗೋನ್ ಮಲೇರಿಯಾ ಅಧಿಕಾರಿ ಡಾ. ಮನೋಜ್ ಕುಮಾರ್ ಪಟಿದಾರ್ ಅವರ ಪ್ರಕಾರ, ಸೊಳ್ಳೆಗಳು ಕೆಲವೊಂದು ಬಣ್ಣಗಳತ್ತ ಹೆಚ್ಚು ಆಕರ್ಷಿತವಾಗುತ್ತವೆ. ವಿಶೇಷವಾಗಿ ಕಪ್ಪು, ಕೆಂಪು, ಗಾಢ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವವರಿಗೆ ಸೊಳ್ಳೆಗಳ ಕಾಟ ಹೆಚ್ಚಿರಬಹುದು. ಆದರೆ ಬಿಳಿ, ತಿಳಿ ಹಸಿರು ಅಥವಾ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ಸೊಳ್ಳೆಗಳು ಆ ವ್ಯಕ್ತಿಯತ್ತ ಹೆಚ್ಚು ಆಕರ್ಷಿತವಾಗುವುದಿಲ್ಲ ಎಂದಿದ್ದಾರೆ.

ಸೊಳ್ಳೆ ಕಡಿತ ತಪ್ಪಿಸಲು ಈ ಸರಳ ಸಲಹೆಗಳನ್ನು ಅನುಸರಿಸಿ:

ಸಂಜೆ ಸಮಯದಲ್ಲಿ ಅಥವಾ ಮಲಗುವಾಗ ಗಾಢ ಬಣ್ಣದ ಬಟ್ಟೆಗಳನ್ನು ಬದಲಿಗೆ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.

ಬೆಳಗಿನ ಜಾವ ಅಥವಾ ಸಂಜೆ ಬಿಸಿಲಿಲ್ಲದ ಸಮಯದಲ್ಲಿ ಹೊರಗೆ ಕುಳಿತುಕೊಳ್ಳುವಾಗ ದೇಹದ ಬಹುಪಾಲು ಭಾಗಗಳನ್ನು ಮುಚ್ಚುವಂತೆ ನೋಡಿಕೊಳ್ಳಿ.

ಮನೆಯ ಸುತ್ತಮುತ್ತ ಯಾವುದೇ ರೀತಿಯ ನಿಂತ ನೀರನ್ನು ತಕ್ಷಣ ತೆಗೆದುಹಾಕಬೇಕು. ಹೂವಿನ ಕುಂಡ, ಟೈರ್, ಕುಡಿಯುವ ಪಾತ್ರೆಗಳು, ಕೂಲರ್‌ಗಳು, ಮುರಿದ ಬಕೆಟ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.

ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ಪರದೆ ಹಾಕುವುದು ಉತ್ತಮ. ಇದು ಮನೆಯ ಒಳಗೆ ಸೊಳ್ಳೆಗಳ ಪ್ರವೇಶವನ್ನು ತಡೆಯುತ್ತದೆ.

ರಾತ್ರಿ ಮಲಗುವಾಗ ಸೊಳ್ಳೆ ನಿವಾರಕ ಕ್ರೀಮ್ ಬಳಸುವುದು ಪರಿಣಾಮಕಾರಿ. ಇನ್ನು, ಸೊಳ್ಳೆ ಬತ್ತಿ ಅಥವಾ ಧೂಪದ್ರವ್ಯ ಸಹ ಸಹಾಯಕವಾಗಬಹುದು.

ಈ ಮಳೆಗಾಲದಲ್ಲಿ ಸೊಳ್ಳೆಗಳ ಬೆಳವಣಿಗೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದರೆ, ಈ ಸಣ್ಣ ಮತ್ತು ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಿದರೆ ಸೊಳ್ಳೆಗಳಿಂದ ದೂರವಿದ್ದು ಆರೋಗ್ಯವಂತ ಜೀವನ ನಡೆಸಬಹುದು. ನೆನಪಿಡಿ – ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಉತ್ತಮ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!