FOOD | ಅನ್ನ ಸಾರು ಜೊತೆಗೆ Pickled Red Onions ಏನ್ ಒಳ್ಳೆ ಕಾಂಬಿನೇಶನ್ ಗೊತ್ತ? ಒಂದ್ಸಲ ಟ್ರೈ ಮಾಡಿ

ಹಳೆ ಸ್ಟೈಲ್ ಈರುಳ್ಳಿ ಉಪ್ಪಿನಕಾಯಿಗೆ ಬದಲಾಗಿ ನೀವು Pickled Red Onions ಟ್ರೈ ಮಾಡಿ ನೋಡಬಹುದು. ಈ ಸಾಂಬಾರು, ಸಾರು ಜೊತೆ ಈ ಉಪ್ಪಿನಕಾಯಿ ಬೆಸ್ಟ್. ಒಂದ್ಸಲ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು:

ಈರುಳ್ಳಿ – 2 ಮಧ್ಯಮ ಗಾತ್ರದ್ದು
ನೀರು – ಅರ್ಧ ಕಪ್
ವಿನೆಗರ್ – ಅರ್ಧ ಕಪ್
ಬೆಲ್ಲ ಅಥವಾ ಸಕ್ಕರೆ – 1.5 ಟೀ ಸ್ಪೂನ್
ಉಪ್ಪು – 1 ಟೀ ಸ್ಪೂನ್
ಕಾಳು ಮೆಣಸು – 5 ರಿಂದ 6
ಜೀರಿಗೆ ಅಥವಾ ಸಾಸಿವೆ – ಐಚ್ಛಿಕ
ಬೆಲ್ಲೆ ಅಥವಾ ಲವಂಗ – 1-2

ತಯಾರಿಸುವ ವಿಧಾನ:

ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಮತ್ತು ವಿನೆಗರ್, ಉಪ್ಪು, ಸಕ್ಕರೆ ಅಥವಾ ಬೆಲ್ಲ ಸೇರಿಸಿ ಚೆನ್ನಾಗಿ ಬೆರಸಿ ಮಧ್ಯಮ ಉರಿಯಲ್ಲಿ ಬಿಸಿಯಾಗುವವರೆಗೆ ಕಾಯಿಸಿ.

ನಂತರ ಈ ಮಿಶ್ರಣವನ್ನು ಕತ್ತರಿಸಿದ ಈರುಳ್ಳಿಗಳ ಮೇಲೆ ಸುರಿದು ಸುಮಾರು 30 ನಿಮಿಷ ತಣ್ಣಗಾಗಲು ಬಿಡಿ. ಈ ಮಿಶ್ರಣವನ್ನು ಒಂದು ಸ್ವಚ್ಛ ಗಾಜಿನ ಬಾಟಲೆಗೆ ಹಾಕಿ ಫ್ರಿಡ್ಜ್‌ನಲ್ಲಿ ಇಟ್ಟುಕೊಳ್ಳಬಹುದು. ಎರಡು ವಾರಗಳವರೆಗೆ ಬಾಳಿಕೆ ಬರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!