ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳು ಚಾಕಲೇಟ್ ತಿನ್ನಬಾರದು, ಅದರಿಂದ ಆರೋಗ್ಯ ಹಾಳಾಗುತ್ತದೆ ಎನ್ನುವ ಆಲೋಚನೆ ಇದೆ. ಆದರೆ ಪ್ರೊಟೀನ್ ಹಾಗೂ ಆರೋಗ್ಯಕರ ಅಂಶಗಳನ್ನು ಹೊಂದಿರುವ ಹಲವಾರು ಚಾಕಲೇಟ್ ಮಾರುಕ್ಟಟೆಯಲ್ಲಿದೆ, ಸ್ವಲ್ಪ ದುಬಾರಿ ಅನಿಸಿದರೂ ಅವುಗಳನ್ನು ಕೊಡಿಸಿ. ಕಡಿಮೆ ಬೆಲೆಗೂ ಕೊಬ್ಬರಿ ಮಿಠಾಯಿ, ಬೆಲ್ಲದ ಮಿಠಾಯಿಗಳು ಇರುತ್ತವೆ ಅವುಗಳನ್ನು ಕೊಡಿಸಬಹುದು. ಇನ್ನು ಮಕ್ಕಳಿಗೆ ಡಾರ್ಕ್ ಚಾಕಲೇಟ್ ಅತ್ಯುತ್ತ ಆಯ್ಕೆ.
ಮಕ್ಕಳು ಚಾಕಲೇಟ್ ತಿನ್ನುವುದರಿಂದ ದೇಹದಲ್ಲಿ ಎಂಡೋಪ್ರಿನ್ಸ್ ಹಾರ್ಮೋನ್ ಬಿಡುಗಡೆಯಾಗುತ್ತದೆ, ಮಕ್ಕಳು ಖುಷಿಯಾಗಿ ಇರುತ್ತಾರೆ.
ಚಾಕಲೇಟ್‌ನಲ್ಲಿ ಫ್ಲೇವೋನಾಲ್ಸ್ ಅಂಶವಿರುತ್ತದೆ, ಅದು ಅವರಲ್ಲಿ ಲೆಕ್ಕದ ಜ್ಞಾನ ಹೆಚ್ಚಿಸುತ್ತದೆ. ಅಲ್ಲದೆ ಮಕ್ಕಳಲ್ಲಿ ಸುಸ್ತು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಡಾರ್ಕ್ ಚಾಕಲೇಟ್ ಪುಟ್ಟ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಚಾಕಲೇಟ್ ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ, ಆದ್ದರಿಂದ ಮಕ್ಕಳು ಅಪರೂಪಕ್ಕೆ ಚಾಕಲೇಟ್ ಸವಿಯುವುದು ಒಳಿತು.
ನೀವು ಬಳಸುವ ಚಾಕಲೇಟ್ ಕೆಫೀನ್ ಫ್ರೀ ಆಗಿರಬೇಕು. ಕಡಿಮೆ ಕೊಬ್ಬಿನಂಶ, ಸಕ್ಕರೆಯಂಶ, ಹಾಲಿನ ಅಂಶವಿರುವ ಚಾಕಲೇಟ್ ಖರೀದಿಸಬೇಕು.