ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಕ್ರಿಕೆಟ್ ಪ್ರಿಯರ ಬಾಯಲ್ಲೀಗ 14ರ ಬಾಲಕ ವೈಭವ್ ಸೂರ್ಯವಂಶಿಯದ್ದೇ ಮಾತು. ವೈಭವ್ ಬ್ಯಾಟ್‌ನಿಂದ ಹೊಮ್ಮಿದ ಸಿಡಿಲಬ್ಬರದ ಶತಕ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಗೆಲುವು ತಂದುಕೊಟ್ಟಿತು. ಇದರೊಂದಿಗೆ ಸತತ 5 ಸೋಲುಗಳ ನಂತರ ಗೆಲುವಿನ ಹಾದಿಗೆ ಮರಳಿದ ರಾಯಲ್ಸ್ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈಭವ್ ವಿಡಿಯೋ ವೈರಲ್ ಆಗುತ್ತಿದ್ದು, ಇಷ್ಟು ಸಣ್ಣ ವಯಸ್ಸಿಗೆ ಆತ ಮಾಡಿರುವ ಸಾಧನೆಯನ್ನು ಕೊಂಡಾಡಿದ್ದಾರೆ. ಇನ್ನು ವೈಭವ್ ಫಿಟ್ ಆಗಿ ಫೀಲ್ಡ್‌ಗೆ ಇಳಿಯೋಕೆ ಡಯಟ್ ಮುಖ್ಯ. ಆತನ ಡಯಟ್ ಹೇಗಿತ್ತು ಎಂದು ಕೋಚ್ ಹೇಳಿದ್ದಾರೆ.
ವೈಭವ್ ಚಿಕ್ಕವನಾದ್ದರಿಂದ ಚಿಕನ್, ಮಟನ್, ಪಿಜ್ಜಾ ಅಂದ್ರೆ ಹೆಚ್ಚು ಪ್ರೀತಿ. ಎಷ್ಟು ಕೊಟ್ಟರೂ ಮುಗಿಸಿಬಿಡುತ್ತಿದ್ದ, ಆದರೆ ಐಪಿಎಲ್ ಹತ್ತಿರ ಬರುತ್ತಿದ್ದಂತೆ ಮಟನ್, ಪಿಜ್ಜಾ ತಿನ್ನೋದನ್ನ ತ್ಯಜಿಸಿದ್ದ. ಅವನಿಗಾಗಿ ಡಯಟ್ ಚಾರ್ಚ್ ಕೂಡ ಮಾಡಲಾಗಿತ್ತು ಎಂದು ಕೋಚ್ ಮನೋಜ್ ಓಜಾ ಹೇಳಿದ್ದಾರೆ.