ದುಬೈಯಿಂದ ಭಾರತಕ್ಕೆ ಬಂದ ಮಗಳು ಅಮ್ಮನಿಗಾಗಿ ಏನು ಗಿಫ್ಟ್ ತಂದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲೀಗ ಟೊಮೊಟೋ ಚರ್ಚೆ. ಕಳೆದ ಕೆಲವು ವಾರಗಳಲ್ಲಿ ಟೊಮೆಟೋ ಬೆಲೆ ಗಗನಕ್ಕೇರಿದೆ (Tomato price hike). ದೇಶದ ಕೆಲವು ಭಾಗಗಳಲ್ಲಿ ಕೆಜಿಗೆ 250 ರೂ. ಆಗಿರುವುದು ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ. ಇದರಿಂದ ಟೊಮೆಟೋ ಬೆಲೆಯೇರಿಕೆ ಆದ ಬಳಿಕ ಒಂದೆಡೆ ಏರಿಕೆಯ ಚರ್ಚೆ ಆದರೆ, ಮತ್ತೊಂದೆಡೆ ಟೊಮೊಟೋ ಕುರಿತು ನಾನಾ ವಿಚಾರಗಳು ವೈರಲ್ ಆಗಿದೆ.

ಮಾರುಕಟ್ಟೆಯಲ್ಲಿ ಟೊಮೆಟೋ ಕಾಯಲು ಸೆಕ್ಯುರಿಟಿ ಕಾರ್ಡ್‌, ಗದ್ದೆಗಳಲ್ಲೂ ಸೆಕ್ಯುರಿಟಿ ಗಾರ್ಡ್‌, ಅಂಗಡಿಗಳಲ್ಲಿ ಉತ್ಪನ್ನ ಕೊಂಡ್ರೆ ಟೊಮೆಟೋ ಫ್ರೀ ಮೊದಲಾದ ವಿಚಾರ ವೈರಲ್ ಆಗ್ತಿದೆ.

ಇದರ ನಡುವೆ ಇದೀಗ ಮಹಿಳೆ ತನ್ನ ತಾಯಿಯ ಡಿಮ್ಯಾಂಡ್ ಮೇರೆಗೆ ದುಬೈನಿಂದ 10 ಕೆಜಿ ಟೊಮ್ಯಾಟೊ ಹೊತ್ತು ತಂದಿರೋ ವಿಚಾರ ವೈರಲ್ ಆಗ್ತಿದೆ.

ತಾಯಿಯ ಕೋರಿಕೆಯ ಮೇರೆಗೆ ಮಹಿಳೆ ದುಬೈನಿಂದ ಭಾರತಕ್ಕೆ 10 ಕೆಜಿ ಟೊಮೆಟೋವನ್ನು ಹೊತ್ತು ತಂದಿದ್ದಾರೆ ಎಂದು ಮಾಡಿರೋ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ. ಟ್ವಿಟರ್ ಬಳಕೆದಾರರು ಭಾರತದಲ್ಲಿ ತಮ್ಮ ತಾಯಿಗೆ (Mother) ದುಬೈ ಮೂಲದ ಸಹೋದರಿ ನೀಡಿರುವ ಕಾಸ್ಟ್ಲೀ ಉಡುಗೊರೆ (Costly gift) ಬಗ್ಗೆ ಹೇಳಿದ್ದಾರೆ.

ದುಬೈ ಮೂಲದ ಮಗಳು (Daughter) ಭಾರತದಲ್ಲಿನ ತನ್ನ ತಾಯಿಗೆ ಐಷಾರಾಮಿ ಶಾಪಿಂಗ್‌ಗೆ ಹೆಸರುವಾಸಿಯಾದ ಯುಎಇ ನಗರದಿಂದ ಏನು ತರಬೇಕು ಎಂದು ಕೇಳಿದಳು. ಈ ಸಂದರ್ಭತಾಯಿ 10 ಕಿಲೋಗ್ರಾಂಗಳಷ್ಟು ಟೊಮೆಟೊ ತರಲು ಹೇಳಿದರು. ‘ರೆವ್ಸ್’ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಈ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ನನ್ನ ತಂಗಿ ಮಕ್ಕಳ ಬೇಸಿಗೆ ರಜೆಯ ನಿಮಿತ್ತ ದುಬೈನಿಂದ ಭಾರತಕ್ಕೆ ಬರುತ್ತಿದ್ದಾಳೆ. ಈ ಸಂದರ್ಭ ಆಕೆ ಪ್ರತಿ ಬಾರಿಯಂತೆ ದುಬೈನಿಂದ ಏನಾದರೂ ತರಬೇಕೆ ಎಂದು ನನ್ನ ಅಮ್ಮನನ್ನು ಕೇಳಿದಳು. ಅಚ್ಚರಿಯೆಂಬಂತೆ ನನ್ನ ತಾಯಿ 10 ಕಿಲೋ ಟೊಮೆಟೊ ತರುವಂತೆ ಹೇಳಿದರು. ಹಾಗಾಗಿ ಈಗ ಸೂಟ್‌ಕೇಸ್‌ನಲ್ಲಿ 10 ಕೆಜಿ ಟೊಮೆಟೋ ಪ್ಯಾಕ್ ಮಾಡಿ ಕಳುಹಿಸಿದ್ದಾಳೆ’ ಎಂದು ಟ್ವೀಟ್ ಮಾಡಿದ್ದಾರೆ.

ಈ ಪೋಸ್ಟ್ ಸಖತ್ ವೈರಲ್ ಆಗಿದೆ. 700ಕ್ಕೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದಾರೆ. 52 ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್‌ನ್ನು ವೀಕ್ಷಿಸಿದ್ದಾರೆ. ಟೊಮೆಟೋ ಬೆಲೆಯೇರಿಕೆಯ ಸಮಯದಲ್ಲಿ ದುಬೈನಲ್ಲಿರುವ ಮಕ್ಕಳ ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಪೋಸ್ಟ್‌ಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!