ಆರೋಗ್ಯ ಕಾಪಾಡಿಕೊಳ್ಳಲು ಪೋಷಕಾಂಶಗಳಿರುವ ಆಹಾರ ಅವಶ್ಯಕ. ಪ್ರತಿದಿನ ನಾವು ತಿನ್ನುವ ಆಹಾರದಲ್ಲಿ ದೇಹಕ್ಕೆ ಬೇಕಾದ ಶಕ್ತಿ, ವಿಟಮಿನ್ ಹಾಗೂ ಖನಿಜಗಳು ದೊರಕಬೇಕು. ಆದರೆ ಇಂದಿನ ಜೀವನಶೈಲಿ ಮತ್ತು ಅಸಮತೋಲಿತ ಆಹಾರ ಪದ್ಧತಿಗಳಿಂದಾಗಿ ಅನೇಕರು ಅಗತ್ಯ ಪೋಷಕಾಂಶಗಳನ್ನು ಪಡೆಯದೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಾದಾಮ್ (Almonds) ಅತ್ಯುತ್ತಮ ಆಯ್ಕೆಯಾಗಿದೆ.
ಬಾದಾಮ್ ಅನ್ನು “ನ್ಯೂಟ್ರೀಷನ್ ಪವರ್ ಹೌಸ್” ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರೋಟೀನ್, ಫೈಬರ್, ಉತ್ತಮ ಕೊಬ್ಬು, ವಿಟಮಿನ್ E, ಮ್ಯಾಗ್ನೀಷಿಯಂ, ಕ್ಯಾಲ್ಸಿಯಂ ಸೇರಿದಂತೆ ಹಲವಾರು ಮುಖ್ಯ ಪೋಷಕಾಂಶಗಳಿವೆ. ನಿಯಮಿತವಾಗಿ ಬಾದಾಮ್ ಸೇವಿಸಿದರೆ ಹೃದಯದ ಆರೋಗ್ಯದಿಂದ ಹಿಡಿದು ಮೆದುಳಿನ ಚುರುಕುಗೊಳಿಸುವಿಕೆವರೆಗೆ ಅನೇಕ ಲಾಭಗಳನ್ನು ಪಡೆಯಬಹುದು. ಆದರೆ, ಬಾದಾಮ್ ಬೇಕಾಬಿಟ್ಟಿಯಾಗಿ ತಿಂದರೆ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿದಿನ ಎಷ್ಟು ಬಾದಾಮ್ ತಿನ್ನಬೇಕು ಎಂಬುದಕ್ಕೆ ತಜ್ಞರು ಸ್ಪಷ್ಟವಾದ ಮಾರ್ಗದರ್ಶನ ನೀಡಿದ್ದಾರೆ.
ದಿನಕ್ಕೆ 23 ಬಾದಾಮ್ ಸಾಕು
ನ್ಯೂಟ್ರಿಷನಿಸ್ಟ್‌ಗಳ ಪ್ರಕಾರ ದಿನಕ್ಕೆ 30 ಗ್ರಾಂ ಬಾದಾಮ್ ತಿನ್ನುವುದು ಸೂಕ್ತ ಎನ್ನುತ್ತಾರೆ. ಈ ಪ್ರಮಾಣಕ್ಕೆ ಸರಿಯಾಗಿ 23 ಬಾದಾಮ್ ಬರುತ್ತವೆ. ಅಂದರೆ, ದಿನಕ್ಕೆ 23 ಬಾದಾಮ್ ಸೇವಿಸಿದರೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶ ದೊರೆಯುತ್ತದೆ. ಇದಕ್ಕಿಂತ ಹೆಚ್ಚು ಸೇವನೆ ಮಾಡಿದರೆ ಅಜೀರ್ಣ, ತೂಕ ಹೆಚ್ಚಳ ಹಾಗೂ ಇತರೆ ಆರೋಗ್ಯ ತೊಂದರೆಗಳು ಎದುರಾಗಬಹುದು.
ತಜ್ಞರ ಪ್ರಕಾರ ಬಾದಾಮ್ ನೇರವಾಗಿ ತಿನ್ನುವುದು ಸರಿಯಲ್ಲ. ಬಾದಾಮ್ ದೇಹಕ್ಕೆ ಹೀಟ್ ನೀಡುವ ಗುಣ ಹೊಂದಿದ್ದು, ನೇರ ಸೇವನೆಯಿಂದ ಅಜೀರ್ಣ, ಊರಿಯೂತ ಮತ್ತು ಹೊಟ್ಟೆ ಕಿರಿಕಿರಿ ಉಂಟಾಗಬಹುದು. ಆದ್ದರಿಂದ ಬಾದಾಮ್ ಅನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದು ಸೂಕ್ತ. ಕೆಲವರು ಹುರಿದು ತಿನ್ನುವ ಪದ್ಧತಿಯನ್ನೂ ಅನುಸರಿಸುತ್ತಾರೆ. ಹೀಗೆ ನೆನೆಸಿದ ಬಾದಾಮ್ ತಿಂದರೆ ಪೋಷಕಾಂಶಗಳು ಇನ್ನಷ್ಟು ಸುಲಭವಾಗಿ ದೇಹ ಸೇರಿಕೊಳ್ಳುತ್ತವೆ ಆಗುತ್ತವೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)