ಇಂದಿನ ಜಾಗತೀಕರಣದ ಯುಗದಲ್ಲಿ ಆರೋಗ್ಯಪೂರ್ಣ ಜೀವನಶೈಲಿಗೆ ಪ್ರಾಮುಖ್ಯತೆ ಹೆಚ್ಚಾಗುತ್ತಿದೆ. ಎಷ್ಟೇ ಮಾದರಿಯ ಯಂತ್ರೋಪಕರಣಗಳಿದ್ದರೂ ಹಿಂದಿನ ಕಾಲದ ಜೀವನಪದ್ದತಿಯಲ್ಲಿದ್ದ ಕೆಲವೊಂದು ಸರಳ ಅಭ್ಯಾಸಗಳು ಇಂದಿಗೂ ಆರೋಗ್ಯಕ್ಕೆ ಬಹುಪಾಲು ಲಾಭವನ್ನು ತರುತ್ತವೆ. ಅದರಲ್ಲಿ ನೆಲದ ಮೇಲೆ ಕುಳಿತುಕೊಳ್ಳುವುದು ಒಂದು.
ಇಂದು ಡೈನಿಂಗ್ ಟೇಬಲ್ ಅಥವಾ ಸೊಫಾದ ಉಪಯೋಗ ಸಾಮಾನ್ಯವಾದರೂ, ಕೆಲ ವರ್ಷಗಳ ಹಿಂದೆ ಹೆಚ್ಚಿನವರು ಊಟಕ್ಕೆ ಅಥವಾ ವಿಶ್ರಾಂತಿಗೆ ನೆಲದ ಮೇಲೆಯೇ ಕುಳಿಯುತ್ತಿದ್ದರು. ಇಂಥ ಅಭ್ಯಾಸದ ಹಿಂದೆ ಆರೋಗ್ಯದ ದೃಷ್ಟಿಕೋನದಿಂದ ಬಹುಪಾಲು ಪ್ರಯೋಜನಗಳಿವೆ.
ನೆಲದ ಮೇಲೆ ಕುಳಿತು ಆಹಾರ ಸೇವಿಸುವುದು ಅಥವಾ ವಿಶ್ರಾಂತಿ ಪಡೆಯುವುದು ದೇಹದ ಭಂಗಿಯನ್ನು ಸರಿಪಡಿಸುತ್ತದೆ. ಭುಜಗಳು ಮತ್ತು ಬೆನ್ನು ನೇರವಾಗುವ ಮೂಲಕ ಸುಧಾರಿತ ಶರೀರ ಅಭಿವೃದ್ಧಿಯಾಗುತ್ತದೆ. ಇದರಿಂದ ಸುತ್ತಮುತ್ತಲಿನ ಸ್ನಾಯುಗಳು ಬಲಶಾಲಿಯಾಗುತ್ತವೆ.
ಇದೇ ಸಮಯದಲ್ಲಿ ದೇಹದಲ್ಲಿ ನಮ್ಯತೆಯೂ ಹೆಚ್ಚಾಗುತ್ತದೆ. ನೆಲದ ಮೇಲಿನ ಕುಳಿತುಕೊಳ್ಳುವ ಭಂಗಿಯು ಬೆನ್ನುಮೂಳೆ ಹಿಗ್ಗಲು ಸಹಕಾರಿಯಾಗುತ್ತದೆ.
ಜೀರ್ಣಾಂಗ ವ್ಯವಸ್ಥೆಯು ಸುಧಾರಿತವಾಗುವುದೂ ಇದರ ಮತ್ತೊಂದು ಲಾಭ. ಆಹಾರ ಸೇವಿಸುವಾಗ ವ್ಯಕ್ತಿ ಮುಂದಕ್ಕೆ ಬಾಗುತ್ತಾ, ನಂತರ ಹಿಂತಿರುಗುತ್ತಾ ತಿನ್ನುವುದರಿಂದ ಹೊಟ್ಟೆಯ ಸ್ನಾಯುಗಳ ಮೇಲೆ ಒತ್ತಡ ಬರುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.
ಮತ್ತೊಂದೆಡೆ, ಧ್ಯಾನ, ಪ್ರಾಣಾಯಾಮ ಮತ್ತು ಯೋಗಾಭ್ಯಾಸಗಳಿಗೆ ಸೂಕ್ತವಾದ ಭಂಗಿಯು ನೆಲದ ಮೇಲೆ ಕುಳಿತುಕೊಳ್ಳುವುದು. ಇದು ಮನಸ್ಸಿಗೆ ನೆಮ್ಮದಿ ನೀಡುತ್ತದೆ, ಆಮ್ಲಜನಕ ಹರಿವು ಹೆಚ್ಚಿಸುತ್ತದೆ ಮತ್ತು ಒತ್ತಡ ನಿವಾರಣೆಗೆ ಸಹಕಾರಿಯಾಗುತ್ತದೆ.
ಅಂತೆಯೇ, ದೇಹದ ವಿವಿಧ ಕೀಲುಗಳ ಸುತ್ತಲಿನ ಚಲನೆ, ಬಾಗುವುದು, ನಗುವುದು ಇತ್ಯಾದಿಯಿಂದ ಚಲನಶೀಲತೆಯು ಸುಧಾರಿಸುತ್ತಿದೆ. ಇದು ವಯಸ್ಸಾದವರಿಗೂ ಸಹ ಸಹಾಯ ಮಾಡುತ್ತದೆ. ಹೀಗಾಗಿ, ಆರೋಗ್ಯವಂತ ಜೀವನಕ್ಕಾಗಿ ಈ ಸರಳ ಅಭ್ಯಾಸವನ್ನು ಇಂದಿನಿಂದಲೇ ಅಳವಡಿಸಿಕೊಳ್ಳುವುದು ಉತ್ತಮ.