ಜಗತ್ತಿನ ಅತಿ ದುಬಾರಿ ಹಸು ಯಾವುದು ಗೊತ್ತಾ? ಅದ್ರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ, ಜೊತೆಗೆ ಹೆಮ್ಮೆನೂ ಪಡ್ತಿರಾ!

ಒಂದು ಹಸುವಿನ ಬೆಲೆ ಎಷ್ಟಿರಬಹುದು ಎಂಬ ಪ್ರಶ್ನೆಗೆ ಇತ್ತೀಚೆಗೆ ಒಂದು ಅಚ್ಚರಿಯ ಉತ್ತರ ಸಿಕ್ಕಿದೆ. ಭಾರತೀಯ ನೆಲ್ಲೂರು ತಳಿಗೆ ಸೇರಿದ ‘ವಯಾಟಿನಾ-19’ (Viatina-19 FIV Mara Imóveis) ಹೆಸರಿನ ಹಸು ಬ್ರೆಜಿಲ್‌ನಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಇದರೊಂದಿಗೆ, ಈ ಹಸು ಜಗತ್ತಿನ ಅತಿ ದುಬಾರಿ ಹಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಹಸುವಿನ ತೂಕ 1,101 ಕಿಲೋಗ್ರಾಂ ಇದ್ದು, ಇದು ಸಾಮಾನ್ಯ ನೆಲ್ಲೂರು ತಳಿಯ ಹಸುಗಳ ತೂಕಕ್ಕಿಂತ ಎರಡು ಪಟ್ಟು ಹೆಚ್ಚು. ಇದರಿಂದಾಗಿ ಇದು ಗಾತ್ರ ಹಾಗೂ ಆನುವಂಶಿಕ ಗುಣಗಳಿಂದ ಗಮನಸೆಳೆದಿದೆ.

ವಯಾಟಿನಾ-19 ಎಂಬ ಈ ಹಸು ಭಾರತೀಯ ಮೂಲದ ತಳಿಯಾಗಿದ್ದು, ಅದರ ಮೂಲ ನೆಲ್ಲೂರು ಜಿಲ್ಲೆಯ ಒಂಗೋಲ್ ಜಾನುವಾರುಗಳಿಂದ ಬಂದಿದೆ. ಈ ತಳಿ ವೈಜ್ಞಾನಿಕವಾಗಿ ‘ಬಾಸ್ ಇಂಡಿಕಸ್’ (Bos indicus) ಎಂದು ಗುರುತಿಸಲಾಗುತ್ತದೆ. ಸುಡುವ ಹವಾಮಾನ, ಬರಪ್ರದ ಪ್ರದೇಶಗಳಿಗೆ ಹೊಂದಿಕೊಳ್ಳುವ ಶಕ್ತಿ ಮತ್ತು ರೋಗ ನಿರೋಧಕತೆ ಇದರ ಮುಖ್ಯ ಗುಣ ಲಕ್ಷಣಗಳಾಗಿವೆ.

ಭಾರತದಿಂದ ಈ ತಳಿ ಹಸುಗಳನ್ನು ಬ್ರೆಜಿಲ್‌ಗೆ ಮೊದಲ ಬಾರಿಗೆ 1868 ರಲ್ಲಿ ತರಲಾಯಿತು. ಒಂಗೋಲ್ ತಳಿಯ ಎರಡು ಎತ್ತುಗಳು ಮತ್ತು ಎರಡು ಹಸುಗಳು ಸುಮಾರು 13,000 ಕಿಲೋಮೀಟರ್ ಪ್ರಯಾಣ ಮಾಡಿ ಬ್ರೆಜಿಲ್‌ನ ಬಹಿಯಾ ರಾಜ್ಯದ ಪಶುಪಾಲನಾ ಕ್ಷೇತ್ರಕ್ಕೆ ಸೇರಿದವು. ನಂತರದ ದಶಕಗಳಲ್ಲಿ ಹೆಚ್ಚಿನ ಜಾನುವಾರುಗಳನ್ನು ರಫ್ತು ಮಾಡುವ ಮೂಲಕ ಭಾರತೀಯ ತಳಿಯ ಪ್ರಭಾವವನ್ನು ಪ್ರಬಲಗೊಳಿಸಲಾಯಿತು.

ಹಾಲು ಉತ್ಪಾದನೆಗಾಗಿ ಈ ತಳಿಗೆ ಸ್ಥಳೀಯ ಡಚ್ ತಳಿಯ ಜಾನುವಾರುಗಳನ್ನು ಜೋಡಿಸಿ ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸುವಂತೆ ಬೆಳೆಸಲಾಯಿತು. ಈ ತಳಿಯು ವಿಶೇಷವಾಗಿ ಉಷ್ಣವಲಯದ ಪ್ರದೇಶಗಳಿಗೆ ಅತ್ಯುತ್ತಮವಾಗಿ ಹೊಂದಿಕೊಂಡ ಕಾರಣ ವಿಶ್ವದ ಅನೇಕ ದೇಶಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.

ವಯಾಟಿನಾ-19 ಹಸು ಎಷ್ಟೊಂದು ವಿಶಿಷ್ಟವಾಗಿದೆಯೆಂದರೆ, ಅದನ್ನು ನಿರ್ದಿಷ್ಟವಾಗಿ ಉತ್ತಮ ಆನುವಂಶಿಕ ಗುಣಗಳನ್ನು ಹೊಂದಿರುವ ಹಸುವಾಗಿ ಪೋಷಿಸಿ ಬೆಳೆಸಲಾಗಿದೆ. ಈ ಕಾರಣದಿಂದಲೇ ಜಾನುವಾರು ತಳಿಶಾಸ್ತ್ರದಲ್ಲಿ ಇದು ಮಹತ್ವದ ಗಮನ ಸೆಳೆಯುತ್ತಿದೆ. ಜಾನುವಾರು ಉದ್ಯಮದಲ್ಲಿ ಆನುವಂಶಿಕ ಗುಣಗಳ ಪ್ರಾಮುಖ್ಯತೆಯನ್ನು ಇದು ಇನ್ನಷ್ಟು ಉನ್ನತ ಮಟ್ಟಕ್ಕೆ ತರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!