ಚಿಕನ್‌ ಬಿರಿಯಾನಿ ತಿಂದು ಬಿಲ್‌ ಕೊಡೋವಾಗ ಖದೀಮರು ಏನು ಮಾಡಿದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೋಟೆಲ್‌ವೊಂದರಲ್ಲಿ ಚಿಕನ್‌ ಬಿರಿಯಾನಿ ತಿಂದು ₹500ರ ನಕಲಿ ನೋಟ್‌ ಕೊಟ್ಟು ಬಿಲ್‌ ಪಾವತಿಸಿ ವಂಚಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಈ ಸಂಬಂಧ ಮಂಜುನಾಥ ಹಾಗೂ ರಮೇಶ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ನಗರದ ಹೋಟೆಲ್‌ವೊಂದರಲ್ಲಿ ಚಿಕನ್ ಬಿರಿಯಾನಿ ತಿಂದು ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಿದ್ದ ₹500ರ ನಕಲಿ ನೋಟನ್ನು ನೀಡಿ ಬಿಲ್‌ ಪಾವತಿಸಿದ್ದಾರೆ. ಇದಾದ ಸ್ವಲ್ಪ ಹೊತ್ತಿನ ಬಳಿಕ ಹೋಟೆಲ್ ಮಾಲೀಕನಿಗೆ ಅನುಮಾನ ಬಂದು ನೋಟನ್ನು ಪರಿಶೀಲನೆ ನಡೆಸಿದಾಗ ನೋಟು ನಕಲಿ ಎಂಬುದು ಬಯಲಾಗಿದೆ.

ಈ ಸಂಬಂಧ ಹೋಟೆಲ್ ಮಾಲೀಕ ನೀಡಿದ ದೂರಿನ ಮೇರೆಗೆ ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!