ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.
ಬೆಂಗಳೂರು ಏರ್‌ಪೋರ್ಟ್‌ನ ಟಿ2 ಟರ್ಮಿನಲ್ ಯುನೆಸ್ಕೋದ 2023ರ ಪ್ರಿಕ್ಸ್ ವರ್ಸೇಲ್ಸ್‌ನ ಪ್ರತಿಷ್ಠಿತ World Special Prize for an Interior ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಟರ್ಮಿನಲ್ ಇನ್ ಎ ಗಾರ್ಡನ್‌ನ್ನು ವಿಶ್ವದ ಅತ್ಯಂದ ಸುಂದರ ವಿಮಾನ ನಿಲ್ದಾಣ ಎಂದು ಹೇಳಲಾಗಿದೆ. ಗೋಲ್ಡನ್ ಕಲರ್‌ನಲ್ಲಿ ಕಂಗೊಳಿಸುವ ಏರ್‌ಪೋರ್ಟ್ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುತ್ತಿದೆ.
ಬೇರೆ ದೇಶಗಳಿಗೆ ಟ್ರಾವೆಲ್ ಮಾಡುವ ಜನರು ಏರ್‌ಪೋರ್ಟ್‌ನ್ನು ಪ್ರೇಕ್ಷಣೀಯ ಸ್ಥಳದಂತೆಯೇ ಕಂಡಿದ್ದಾರೆ. ಹಸಿರು ಗೋಡೆ, ಕೃತಕ ಫಾಲ್ಸ್, ಬಿದಿರಿನ ಸಿಂಗಾರ ನೋಡುಗರ ಗಮನಸೆಳೆದಿದೆ.