ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಟ್ರಾಫಿಕ್ ಕಾರಣದಿಂದ ಹೆಚ್ಚು ಸುದ್ದಿಯಾಗುವ ಸಿಟಿ ಅಂದರೆ ಅದು ಬೆಂಗಳೂರು. ಆದರೆ ವಿಶ್ವದ ರ‍್ಯಾಂಕಿಂಗ್‌ನಲ್ಲಿ ಬೆಂಗಳೂರಿಗಿಂತ ಮುಂಚೆ ಭಾರತದ ಮತ್ತೊಂದು ನಗರ ಇದೆ ಅನ್ನೋದು ನಿಮಗೆ ಗೊತ್ತಾ?
ಹೌದು! ಇತ್ತೀಚಿಗೆ ಟಾಮ್‌ಟಾಮ್ ಇಂಡೆಕ್ಸ್ ಟ್ರಾಫಿಕ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸ್ಲೋ ಸಿಟಿಯ 2ನೇ ಸ್ಥಾನ ಭಾರತದ ಕೋಲ್ಕತಾ ಪಡೆದುಕೊಂಡಿದೆ. ಭಾರತ ನಗರಗಳ ಪೈಕಿ ಕೋಲ್ಕತಾ ಮೊದಲ ಸ್ಥಾನದಲ್ಲಿದೆ. ಕೋಲ್ಕತಾ ನಗರದಲ್ಲಿ ಒಂದು ಗಂಟೆಯಲ್ಲಿ ಕೇವಲ 17 ಕಿಲೋಮೀಟ್ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಯನ ವರದಿ ಹೇಳುತ್ತದೆ.
ವಿಶ್ವದಲ್ಲಿ ಮೊದಲ ಸ್ಥಾನದಲ್ಲಿ ಸ್ಲೋ ಸಿಟಿ ಅನ್ನೋ ಕುಖ್ಯಾತಿ ಕೊಲಂಬಿಯಾದ ಬ್ರಾಂಕ್ವಿಲಾ ನಗರಕ್ಕೆ ಸಿಕ್ಕಿದೆ. ಇಲ್ಲಿ 10 ಕಿ.ಮೀ. ಪ್ರಯಾಣ ಮಾಡಲು ಇಲ್ಲಿ 36 ನಿಮಿಷ 6 ಸೆಕೆಂಡ್ ಹೆಚ್ಚುವರಿ ಸಮಯ ಟ್ರಾಫಿಕ್‌ನಲ್ಲಿ ಕಳೆಯಬೇಕು ಎಂದು ವರದಿ ಹೇಳುತ್ತಿದೆ.
ಬೆಂಗಳೂರು ವಿಶ್ವದ ಸ್ಲೋ ಸಿಟಿಗಳಲ್ಲಿ 3ನೇ ಸ್ಥಾನದಲ್ಲಿದೆ. ಜೊತೆಗೆ ಭಾರತದ 2ನೇ ಸ್ಥಾನದಲ್ಲಿದೆ. ಪುಣೆ ವಿಶ್ವದ ಸ್ಲೋ ಸಿಟಿಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.