ಚಂದದ ಮನೆ ಮಾಡಿ ಕೆಟ್ಟ ಹೋಮ್ ಡೆಕೋರ್ ಮಾಡಿಕೊಂಡ್ರೆ ಉಪಯೋಗ ಇಲ್ಲ. ಹಾಗೆ ಮನೆಯ ಶಾಂತಿ ನೆಮ್ಮದಿಗಾಗಿಯೂ ಯಾವ ಫೋಟೊವನ್ನು ಯಾವ ಜಾಗದಲ್ಲಿ ಹಾಕಬೇಕು ಅನ್ನೋದನ್ನು ತಿಳಿದುಕೊಳ್ಳಿ..

ಎಂಟ್ರೆನ್ಸ್ ಅಥವಾ ಮುಖ್ಯದ್ವಾರದಲ್ಲಿ ಗಣೇಶ, ಲಕ್ಷ್ಮಿದೇವಿ ಅಥವಾ ಹೂವುಗಳ ಫೋಟೊ ಹಾಕಬಹುದು. ಇದು ಪಾಸಿಟಿವ್ ಎನರ್ಜಿ ನೀಡುತ್ತದೆ.

ಲಿವಿಂಗ್ ರೂಮ್‌ನಲ್ಲಿ ಕುಟುಂಬದ ಫೋಟೊಸ್, ಖುಷಿಯಾಗಿ ಕಾಣುವ ಫೋಟೊ, ಮರಗಳು ನೇಚರ್‌ನ ಫೋಟೊ ಹಾಕಬಹುದು. ಇದರಿಂದ ಮನೆಯ ಖುಷಿ ಹಾಳಾಗೋದಿಲ್ಲ.

ಫ್ಯಾಮಿಲಿ ಫೋಟೊ ಹಾಕೋಕೆ ಬೆಸ್ಟ್ ಡೈರೆಕ್ಷನ್ ನೈರುತ್ಯ ದಿಕ್ಕು. ಇಲ್ಲಿ ನಿಮ್ಮವರ ಫೋಟೊಗಳನ್ನು ಹಾಕಿದರೆ ದೃಷ್ಟಿ ತಾಗೋದಿಲ್ಲ.

ಡೈನಿಂಗ್ ರೂಮ್‌ನಲ್ಲಿ ಊಟಕ್ಕೆ ಸಂಬಂಧಿಸಿದ ಫೋಟೊಗಳು ಬೆಸ್ಟ್, ನೇಚರ್, ಹಣ್ಣುಗಳು, ಊಟಕ್ಕೆ ಕೂತ ಫ್ಯಾಮಿಲಿ ಫೋಟೊ ಹಾಕಬಹುದು.

ಬೆಡ್‌ರೂಮ್‌ನಲ್ಲಿ ಶಾಂತಿಯುತ ಫೋಟೊಗಳು ಬೆಸ್ಟ್. ಹೂವು, ಶಾಂತಿ ನೀಡುವ ಲ್ಯಾಂಡ್‌ಸ್ಕೇಪ್‌ಗಳು ಬೆಸ್ಟ್. ಭಯತರಿಸುವ ನೆಗೆಟಿವ್ ಶೇಡ್‌ನ ಫೋಟೊಗಳನ್ನು ಹಾಕಬೇಡಿ. ಕಪಲ್ ಫೋಟೊ ಹಾಕೋಕೆ ನೈರುತ್ಯ ದಿಕ್ಕು ಬೆಸ್ಟ್.

ಮಕ್ಕಳ ರೂಮಿನಲ್ಲಿ ಅವರ ಮುದ್ದು ಫೋಟೊಗಳು, ಆಟದ ವೈಬ್ ನೀಡುವ ಇಮೇಜಸ್ ಬೆಸ್ಟ್. ಮಕ್ಕಳ ಎನರ್ಜಿಯನ್ನು ಸೂಚಿಸುವ ಫೋಟೊಗಳನ್ನು ಬಳಕೆ ಮಾಡಿ.

ಸ್ಟೇರ್‌ಕೇಸ್ ಬಳಿ ಯಾವ ಫೋಟೊ ಬೇಕಾದರೂ ಹಾಕಿ ಆದರೆ ಫ್ಯಾಮಿಲಿ ಫೋಟೊ ಬೇಡ. ದೇವರ ಮನೆಯಲ್ಲಿ ದೇವರು, ರುದ್ರಾಕ್ಷಿ ಇನ್ನಿತರ ಫೋಟೊಗಳು ಬೆಸ್ಟ್




