ಅವಾಚ್ಯ ಶಬ್ದ ಹೆಚ್ಚಾಗಿ ಬಳಸುವ ರಾಜ್ಯ ಯಾವುದು ಗೊತ್ತಿದ್ಯಾ? ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಣ್ಣ ಪುಟ್ಟ ಜಗಳವಾದಾಗ ಬಹುತೇಕರು ಅವಾಚ್ಯ ಶಬ್ದಗಳನ್ನು ಬಳಸುವುದನ್ನು ನೋಡಿರುತ್ತೀರಿ. ಆದರೆ ತಾಯಂದಿರು, ಸಹೋದರಿಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವಲ್ಲಿ ಯಾವ ರಾಜ್ಯದ ಜನರು ಮುಂದಿದ್ದಾರೆ ಎಂದು ಹೊಸ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಹಾಗಾದ್ರೆ ಅವಾಚ್ಯ ಶಬ್ದವನ್ನು ಹೆಚ್ಚಾಗಿ ಬಳಸುವ ರಾಜ್ಯ ಯಾವುದು? ಇಲ್ಲಿದೆ ಮಾಹಿತಿ.

ದೇಶದಲ್ಲಿ ಅವ್ಯಾಚ ಪದಗಳನ್ನು ಹೆಚ್ಚು ಬಳಸುವವರು ಯಾವ ರಾಜ್ಯದವರು ಎನ್ನುವ ಬಗ್ಗೆ ವಿಶಿಷ್ಟ ಸಮೀಕ್ಷೆಯನ್ನು ನಡೆಸಲಾಗಿದೆ. ಸೆಲ್ಸಿ ವಿತ್ ಡಾಟರ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ರೋಕ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸುನಿಲ್ ಜಗ್ಲಾನ್ ಈ ಸಮೀಕ್ಷೆ ನಡೆಸಿದ್ದಾರೆ. ನಿಂದನೀಯ ಪದಗಳನ್ನು ಬಳಸುವ ರಾಜ್ಯಗಳಲ್ಲಿ ದೆಹಲಿ ಅಗ್ರಸ್ಥಾನದಲ್ಲಿದೆ ಎಂದು ಈ ಸಮೀಕ್ಷೆಯೂ ಬಹಿರಂಗಪಡಿಸಿದೆ.

ದೆಹಲಿಯ ಶೇ. 80 ರಷ್ಟು ಜನರು ಅವಾಚ್ಯ ಶಬ್ದಗಳನ್ನು ಬಳಸುವ ಮೂಲಕ ಮೊದಲ ಸ್ಥಾನವನ್ನು ಗಳಿಸಿದೆ. ಶೇ. 78 ರಷ್ಟು ಶ್ರೇಯಾಂಕದೊಂದಿಗೆ ಪಂಜಾಬ್‌ ಎರಡನೇ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಮೂರನೇ ಸ್ಥಾನದ್ದು, ಶೇ. 74 ರಷ್ಟು ಜನರು ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ ಎನ್ನಲಾಗಿದೆ. ಕರ್ನಾಟಕವು ಹನ್ನೊಂದನೇ ಸ್ಥಾನವನ್ನು ಗಳಿಸಿಕೊಂಡಿದೆ. ಇನ್ನು, ಇತರ ರಾಜ್ಯಗಳಲ್ಲಿ 20-30 ಪ್ರತಿಶತ ಜನರು ಮಾತ್ರ ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!