March 23, 2026
Monday, March 23, 2026
spot_img

ಇಲ್ಲಿಯವರೆಗೆ IPL ಫೈನಲ್ ತಲುಪದ ತಂಡವೊಂದಿದೆ ಅದು ಯಾವುದು ಗೊತ್ತಾ? ಈ ಬಾರಿನಾದ್ರೂ ಹೋಗುತ್ತೋ ಏನೋ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಐಪಿಎಲ್ 2026 ಸೀಸನ್‌ಗೆ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ, ಎಲ್ಲರ ಗಮನ ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೇಲೆ ನೆಟ್ಟಿದೆ. ಇನ್ನೂ ಒಮ್ಮೆಯೂ ಫೈನಲ್ ತಲುಪದ ಈ ತಂಡ, ಈ ಬಾರಿ ಆ ಇತಿಹಾಸವನ್ನು ಬದಲಿಸಲು ಸಜ್ಜಾಗಿದೆ.

2022ರಲ್ಲಿ ಲೀಗ್‌ಗೆ ಪ್ರವೇಶಿಸಿದ ಲಕ್ನೋ ತಂಡ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿದರೂ, ಪ್ಲೇಆಫ್ ಹಂತದಲ್ಲಿ ಅಡಕವಾಗುತ್ತಲೇ ಬಂದಿದೆ.

ಮೊದಲ ಎರಡು ಸೀಸನ್‌ಗಳಾದ 2022 ಮತ್ತು 2023ರಲ್ಲಿ ಲಕ್ನೋ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. ಆದರೆ ಎರಡೂ ಬಾರಿ ಎಲಿಮಿನೇಟರ್ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತು. ಒಂದು ವೇಳೆ ಆರ್‌ಸಿಬಿ ವಿರುದ್ಧ, ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನ್ನು ಕಂಡಿತ್ತು. ಈ ಹಿನ್ನಡೆಯಿಂದ ಫೈನಲ್ ಕನಸು ಕೈ ತಪ್ಪಿತ್ತು.

ಇದನ್ನೂ ಓದಿ:

ಆದರೆ 2024 ಮತ್ತು 2025 ಸೀಸನ್‌ಗಳಲ್ಲಿ ತಂಡದ ಪ್ರದರ್ಶನ ಕುಸಿತ ಕಂಡಿತು. ಲೀಗ್ ಹಂತದಲ್ಲೇ ಹೊರಬಿದ್ದ ಲಕ್ನೋ ತಂಡ, ನಿರೀಕ್ಷಿತ ಮಟ್ಟದಲ್ಲಿ ಆಟ ತೋರಲು ವಿಫಲವಾಯಿತು. ಇದರಿಂದ ತಂಡದ ಮೇಲೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

ಇದೀಗ 2026ರ ಐಪಿಎಲ್‌ಗಾಗಿ ಲಕ್ನೋ ಹೊಸ ತಂತ್ರಗಳೊಂದಿಗೆ ಸಜ್ಜಾಗಿದೆ. ಹೊಸ ನಾಯಕತ್ವ, ಸಮತೋಲಿತ ಆಟಗಾರರ ಬಳಗ ಹಾಗೂ ಬಲಿಷ್ಠ ಬ್ಯಾಟಿಂಗ್-ಬೌಲಿಂಗ್ ಸಂಯೋಜನೆಯೊಂದಿಗೆ ತಂಡ ಕಣಕ್ಕಿಳಿಯುತ್ತಿದೆ. ಈ ಬಾರಿ ಯಾವುದೇ ತಪ್ಪು ಮಾಡದೆ ಫೈನಲ್ ತಲುಪಿ ಮೊದಲ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ.

ತಂಡದ ಸಾಮರ್ಥ್ಯವನ್ನು ಗಮನಿಸಿದರೆ, ಲಕ್ನೋ ಸೂಪರ್ ಜೈಂಟ್ಸ್ ಈ ಬಾರಿ ಹೊಸ ಇತಿಹಾಸ ಬರೆಯುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !