ಇಷ್ಟಕ್ಕೂ ದೇಶಪ್ರೇಮ ಬಡಿದೆಬ್ಬಿಸಿದ ‘ಆಪರೇಷನ್ ಸಿಂದೂರ’ ಲೋಗೋ ರಚಿಸಿದ್ದು ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತೇ ತಿರುಗಿ ನೋಡುವಂತೆ ಭಾರತ ನಡೆಸಿದ ‘ಆಪರೇಷನ್ ಸಿಂದೂರ’ದ ಬಳಿಕ ಎಲ್ಲೆಲ್ಲೂ ರಾರಾಜಿಸಿದ್ದು ಅದರ ಲೋಗೋ.

ಅತ್ಯಂತ ಪ್ರಬಲ ಹಾಗೂ ದೇಶಪ್ರೇಮವನ್ನು ಬಡಿದೆಬ್ಬಿದ್ದ ಈ ಲೋಗೋವನ್ನು ವಿನ್ಯಾಸಗೊಳಿಸಿದವರು ಯಾರು ಎಂದು ಗೊತ್ತೇ?

ಇದನನ್ನು ವಿನ್ಯಾಸಗೊಳಿಸಿದವರು ಬೇರಾರೂ ಅಲ್ಲ. ಖುದ್ದು ಸೇನಾ ಸಿಬ್ಬಂದಿಗಳು. ಲೆಫ್ಟಿನೆಂಟ್ ಕರ್ನಲ್ ಹರ್ಷ ಗುಪ್ತಾ ಮತ್ತು ಹವಾಲ್ದಾರ್ ಸುರೀಂದರ್ ಸಿಂಗ್ ಅವರು ವಿನ್ಯಾಸಗೊಳಿಸಿದ ಈ ಲೋಗೋ ಇಂದು ವಿಶ್ವವಿಖ್ಯಾತಗೊಂಡು ಭಾರತದ ಶೌರ್ಯಕ್ಕೆ ಪ್ರತೀಕವಾಗಿದೆ.

ಈ ವಿನ್ಯಾಸವು ಕೇವಲ ಚಿತ್ರಕ್ಕಿಂತ ಹೆಚ್ಚಿನ ಅರ್ಥ ನೀಡುತ್ತದೆ. ಜೊತೆಗೆ ಭಾವನೆಯನ್ನೂ ಬಿತ್ತುತ್ತದೆ. ಆಪರೇಷನ್ ಸಿಂದೂರ್ ಎಂಬ ದಪ್ಪ ಅಕ್ಷರಗಳು ಹಾಗೂ ’ಒ’ಗಳಲ್ಲಿ ಒಂದನ್ನು ಕುಂಕುಮದ ಬಟ್ಟಲು ಚಿತ್ರಿಸಲಾಗಿದ್ದರೆ, ಕೆಲವು ಕುಂಕುಮ ಪುಡಿಗಳು ರಕ್ತದ ಹನಿಗಳನ್ನು ಹೋಲುವಂತೆ ರಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!