ಕೋಟ್ಯಂತರ ಅಭಿಮಾನಿಗಳು ಮೆಚ್ಚಿ, ಅಪ್ಪಿಕೊಂಡ RCB ತಂಡದ ರಿಯಲ್ ಓನರ್ ಯಾರು ಗೊತ್ತಿದ್ಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಆರ್​ಸಿಬಿ ಕಪ್ ಗೆದ್ದ ಸಂಭ್ರಮ ಇಡೀ ಕರ್ನಾಟಕದಲ್ಲಿ ಮನೆ ಮಾಡಿದೆ.

ಐಪಿಎಲ್​ನ ಒಂದು ಫ್ರಾಂಚೈಸಿ ಆಗಿರುವ ಆರ್​ಸಿಬಿ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. 2008ರಲ್ಲಿ ಸ್ಥಾಪನೆಯಾದ ಈ ಫ್ರಾಂಚೈಸಿಯು ಐಪಿಎಲ್ ಉದ್ಘಾಟನಾ ವರ್ಷದಿಂದಲೇ ಇದೆ. ಐಪಿಎಲ್ ಆರಂಭವಾಗಿ 17 ವರ್ಷ ಕಳೆದರೂ ಒಂದು ಬಾರಿಯೂ ಕಪ್ ಗೆದ್ದಿರಲಿಲ್ಲ. ಈ ಬಾರಿ 18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್ ಗೆಲ್ಲುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಕನಸು ನನಸಾಗಿದೆ.

ಕಿಂಗ್ ಫಿಶರ್ ಏರ್​ಲೈನ್ಸ್​ ಆಗಿನ ಅಧ್ಯಕ್ಷರಾಗಿದ್ದ ವಿಜಯ್ ಮಲ್ಯ 111.6 ಮಿಲಿಯನ್ ಡಾಲರ್​​ಗೆ ಆರ್​ಸಿಬಿಯನ್ನು ಖರೀದಿ ಮಾಡಿದ್ದರು. ಇದು ಐಪಿಎಲ್​​ನಲ್ಲಿ ಅತೀ ಹೆಚ್ಚು ಹಣಕ್ಕೆ ಬಿಡ್ ಆಗಿರುವ ಫ್ರಾಂಚೈಸಿ ಆಗಿದೆ. ನಂತರದ ದಿನಗಳಲ್ಲಿ ವಿಜಯ್ ಮಲ್ಯ ಸಾಲದ ಸುಳಿಗೆ ಸಿಲುಕಿ ಮರುಪಾವತಿ ಮಾಡಲಿಲ್ಲ. ಆಗ ಈ ಫ್ರಾಂಚೈಸಿಯನ್ನು ಮತ್ತೊಬ್ಬರು ಖರೀದಿ ಮಾಡಿದ್ದರು. ಪ್ರಸ್ತುತ ಆರ್​​ಸಿಬಿ ಡಿಯಾಜಿಯೊ ಅಂಗಸ್ಥೆಯಾದ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್​ನ ಮಾಲೀಕತ್ವದಲ್ಲಿದೆ. ಪ್ರಥಮೇಶ್ ಮಿಶ್ರಾ ಅನ್ನೋರು ಆರ್​ಸಿಬಿಯ ಅಧ್ಯಕ್ಷರಾಗಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!