DO YOU KNOW | ಮೆಹಂದಿ ಕೈಗೆ ಹಚ್ಚಿದಾಗ ಕೆಂಪುಬಣ್ಣವೇ ಯಾಕೆ ಬರುತ್ತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಹೆಂಗೆಳೆಯರ ನೆಚ್ಚಿನ ಗೋರಂಟಿಯನ್ನು ಮದುವೆ, ಶುಭ ಸಂದರ್ಭಗಳಲ್ಲಿ ಕೈ ಗೆ ಹಚ್ಚುವುದು ಒಂದು ಸಂಪ್ರದಾಯ. ಪತಿ ಪತ್ನಿಯರಲ್ಲಿ ಗೋರಂಟಿಯ ಬಣ್ಣವು ಅವರಿಬ್ಬರ ನಡುವಿನ ಪ್ರೀತಿಯನ್ನು ತಿಳಿಸುತ್ತದೆ ಎನ್ನಲಾಗುತ್ತದೆ.

ಆದರೆ ಮೆಹಂದಿಯ ಬಣ್ಣವು ಕೈಯಲ್ಲಿ ಕೆಂಪು ಅಥವಾ ಕಡು ಕಂದು ಬಣ್ಣ ಮಾತ್ರ ಏಕೆ ಬರುತ್ತದೆ ಎಂದು ಯೋಚಿಸಿದ್ದೀರಾ? ಇಲ್ಲಿದೆ ಉತ್ತರ.

ಮೆಹಂದಿ ಎಲೆಗಳು ವಿಶೇಷ ರೀತಿಯ ರಾಸಾಯನಿಕವನ್ನು ಹೊಂದಿರುತ್ತವೆ. ಇದನ್ನು ಲಾಸೋನ್ ಎಂದು ಕರೆಯಲಾಗುತ್ತದೆ. ಮೆಹಂದಿಯ ಎಲೆಗಳನ್ನು ಪುಡಿಮಾಡಿ ಪೇಸ್ಟ್ ತಯಾರಿಸಿ ಅದನ್ನು ಕೈಗೆ ಹಚ್ಚಿದಾಗ, ಲಾಸೋನ್ ಕೈಯ ಚರ್ಮದಲ್ಲಿರುವ ಪ್ರೋಟೀನ್ (ಕೆರಾಟಿನ್) ನೊಂದಿಗೆ ರಾಸಾಯನಿಕವಾಗಿ ಪ್ರತಿಕ್ರಿಯಿಸುತ್ತದೆ.

ಈ ಪ್ರತಿಕ್ರಿಯೆಯಿಂದಾಗಿ, ಕೆಂಪು ಅಥವಾ ಗಾಢ ಕಂದು ಬಣ್ಣವು ಕೈಯಲ್ಲಿ ಉತ್ಪತ್ತಿಯಾಗುತ್ತದೆ.

ಲಾಸೋನ್‌ನ ನೈಸರ್ಗಿಕ ಬಣ್ಣವು ಕಿತ್ತಳೆ ಬಣ್ಣ ಅಥವಾ ಗಾಢ ಕಂದು ಬಣ್ಣದಲ್ಲಿ ಇರುತ್ತದೆ. ಇದು ಚರ್ಮದೊಂದಿಗೆ ಪ್ರತಿಕ್ರಿಯಿಸಿದಾಗ, ಅದರ ಬಣ್ಣವು ಕೆಂಪು ಅಥವಾ ಗಾಢ ಕಂದು ಬಣ್ಣಕ್ಕೆ ಬದಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here