DO YOU KNOW? | ಸೂರ್ಯಕಾಂತಿ ಸೂರ್ಯನಿಗೆ ಮುಖ ಮಾಡೋದು ಯಾಕೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ!

ಹಲವಾರು ಸುಂದರ ಹೂವುಗಳ ಪೈಕಿ ಉಪಯುಕ್ತವಾದ ಹೂವು ಸೂರ್ಯಕಾಂತಿ. ಇವುಗಳ ಸುಮಾರು 70 ಜಾತಿಗಳನ್ನು ಹೊಂದಿರುವ ಹೂವುಗಳ ಕುಟುಂಬವಾಗಿದೆ. ಅತ್ಯಂತ ಪ್ರಭಾವಶಾಲಿ ಸೂರ್ಯಕಾಂತಿ ಸಸ್ಯವು ಸೂರ್ಯನ ಕಡೆಗೆ ಏಕೆ ತಿರುಗುತ್ತದೆ? ಅನ್ನೋದು ಅನೇಕರಿಗೆ ಗೊತ್ತಿಲ್ಲ. ಇವತ್ತು ನಾವು ಇದರ ಬಗ್ಗೆ ತಿಳಿದು ಕೊಳ್ಳೋಣ.

ಸೂರ್ಯಕಾಂತಿ ಮೊಗ್ಗುಗಳು ಮುಂಜಾನೆ ಪೂರ್ವಕ್ಕೆ ಮುಖ ಮಾಡುತ್ತವೆ. ಅದು ಸೂರ್ಯೋದಯಕ್ಕಾಗಿ ಕಾಯುತ್ತವೆ. ಮೊಗ್ಗುಗಳು ಮಧ್ಯಾಹ್ನ ಸೂರ್ಯನಿಗೆ ನೇರವಾಗಿ ನಿಂತು, ಮಧ್ಯಾಹ್ನದ ನಂತರ ನಿಧಾನವಾಗಿ ಪಶ್ಚಿಮಕ್ಕೆ ಮುಖ ಮಾಡುತ್ತವೆ.

ಈ ಸಸ್ಯಗಳ ಬೆಳವಣಿಗೆಗೆ ಆಕ್ಸಿನ್ ಹಾರ್ಮೋನ್ ಅಗತ್ಯ. ಮೊಗ್ಗಿನ ಕೆಳಗಿನ ಎಲೆಯಲ್ಲಿ ಆಕ್ಸಿಜನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್ ನಿಧಾನವಾಗಿ ಹೂವಿನ ಮೊಗ್ಗುಗಳಿಗೆ ಚಲಿಸುತ್ತದೆ. ಈ ಭಾಗದಲ್ಲಿ ಸೂರ್ಯನ ಬೆಳಕು ಬಿದ್ದರೆ ಹಾರ್ಮೋನ್ ಹೆಚ್ಚು ಸಂಗ್ರಹವಾಗುತ್ತದೆ. ಆ ಭಾಗದಲ್ಲಿ ಜೀವಕೋಶಗಳ ಬೆಳವಣಿಗೆಯ ಪ್ರಮಾಣ ಹೆಚ್ಚು. ಇದರ ಪರಿಣಾಮವಾಗಿ ಸೂರ್ಯಕಾಂತಿಗಳು ನೈಸರ್ಗಿಕವಾಗಿ ಹೆಚ್ಚಿನ ಒತ್ತಡದ ವಿರುದ್ಧ ದಿಕ್ಕನ್ನು ಎದುರಿಸುತ್ತವೆ.

ಫೋಟೊಟ್ರೋಪಿನ್‌ಗಳು ಎಂದು ಕರೆಯಲ್ಪಡುವ ಪ್ರೋಟೀನ್‌ಗಳು ಸಸಿಯ ಮೇಲೆ ಬೆಳಕು ಅಸಮಾನವಾಗಿ ಬೀಳುವುದನ್ನು ಗ್ರಹಿಸುತ್ತವೆ ಮತ್ತು ಸಸ್ಯದ ಬೆಳವಣಿಗೆಯ ಹಾರ್ಮೋನುಗಳು ಮರುಹಂಚಿಕೆಯಾಗುತ್ತವೆ. ಇದು ಹೂವುಗಳು ಬೆಳಕಿನ ಕಡೆಗೆ ಬಾಗಲು ಕಾರಣವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!