HEALTH | ಕಮೋಡ್‌ಗಿಂತ ಇಂಡಿಯನ್‌ ಟಾಯ್ಲೆಟ್‌ ಬೆಸ್ಟ್‌, ಯಾಕೆ ಗೊತ್ತಾ?

ಹಲವು ವರ್ಷಗಳ ಹಿಂದೆ ಯಾವುದಾದರೂ ಮನೆಯಲ್ಲಿ ಕಮೋಡ್‌ ಕಂಡರೆ ವ್ಹಾವ್‌ ವೆಸ್ಟ್ರನ್‌ ಟಾಯ್ಲೆಟ್‌ ನಾವು ಮನೆ ಕಟ್ಟಿಸಿದಾಗ ಹಾಕಿಸಬೇಕು ಎನ್ನುತ್ತಿದ್ದರು. ಆದರೆ ಈಗ ಅಪರೂಪಕ್ಕೆ ಯಾವುದಾದರೂ ಮನೆಯಲ್ಲಿ ಇಂಡಿಯನ್‌ ಟಾಯ್ಲೆಟ್‌ ನೋಡಿದರೆ ಆಶ್ಚರ್ಯವಾಗುತ್ತದೆ. ಏನೇ ಹೇಳಿ ವಯಸ್ಸಾದವರಿಗೆ ಮಾತ್ರ ವೆಸ್ಟ್ರನ್‌ ಟಾಯ್ಲೆಟ್‌ ಬೆಟರ್‌ ಆದರೆ ಮಾಮೂಲಾಗಿ ಹೆಚ್ಚು ಇಂಡಿಯನ್‌ ಟಾಯ್ಲೆಟ್‌ ಪ್ರೀಫರ್‌ ಮಾಡಿ..

ವೆಸ್ಟ್ರನ್‌ ಟಾಯ್ಲೆಟ್‌ ಅಪಾಯ ಏನು?

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಪ್ರತಿ ಭಾರತೀಯ ಪ್ರತಿ ಕುಟುಂಬಗಳಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಮಲಬದ್ಧತೆಯಿಂದ ಬಳಲುತ್ತಿದ್ದಾರೆ. ಮಲಬದ್ಧತೆ ಪ್ರಮಾಣ ಹೆಚ್ಚಾಗಲು ಪಾಶ್ಚಿಮಾತ್ಯ ಶೌಚಾಲಯಗಳು ಕಾರಣವಾಗಿರಬಹುದು.

ಪಾಶ್ಚಿಮಾತ್ಯ ಶೌಚಾಲಯಗಳನ್ನು ಹೆಚ್ಚು ಜನರು ಬಳಸುತ್ತಾರೆ. ಆದ್ದರಿಂದ, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಅಲ್ಲದೆ, ವೆಸ್ಟರ್ನ್ ಟಾಯ್ಲೆಟ್‌ನ ಆಸನವು ದೇಹವನ್ನು ನೇರವಾಗಿ ಮುಟ್ಟುತ್ತದೆ. ಬೇಗನೇ ಸೋಂಕುಗಳು ತಗಲುವ ಸಾಧ್ಯತೆಗಳು ಹೆಚ್ಚು.

 ವೆಸ್ಟರ್ನ್ ಟಾಯ್ಲೆಟ್ ದೀರ್ಘಕಾಲದವರೆಗೆ ಬಳಸುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಇದು ಪೈಲ್ಸ್ ಅಪಾಯವನ್ನು ಹೆಚ್ಚಿಸುತ್ತದೆ. ಹೊಟ್ಟೆಯನ್ನು ಖಾಲಿ ಮಾಡಲು ಗುದ ಸ್ನಾಯುಗಳ ಮೇಲೆ ಒತ್ತಡ ಹೇರುವುದರಿಂದ ಇದು ಸಂಭವಿಸುತ್ತದೆ.

ಊದಿಕೊಂಡ ಗುದನಾಳದ ಮೇಲೆ ಒತ್ತಡ ಹೇರಿದಾಗ, ಗುದನಾಳದ ಅಂಗಾಂಶಗಳು ಹರಿದು ಹೋಗುವ ಸಾಧ್ಯತೆ ಇರುತ್ತದೆ. ಇದು ಬಿರುಕುಗಳ ಸಮಸ್ಯೆಯನ್ನು ಉಂಟುಮಾಡುತ್ತದೆ

ಪಾಶ್ಚಿಮಾತ್ಯ ಶೌಚಾಲಯಗಳಿಗೆ ಭಾರತೀಯ ಶೌಚಾಲಯಗಳಿಗಿಂತ ಹೆಚ್ಚಿನ ನೀರು ಬೇಕಾಗುತ್ತದೆ. ಇದರಿಂದಾಗಿ ಹಲವು ಲೀಟರ್ ನೀರು ವ್ಯರ್ಥವಾಗುತ್ತಿದೆ. ಟಾಯ್ಲೆಟ್ ಪೇಪರ್ ಅನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ.

ಭಾರತೀಯ ಶೌಚಾಲಯಗಳಿಗೆ ಹೋಲಿಸಿದರೆ ಪಾಶ್ಚಿಮಾತ್ಯ ಶೌಚಾಲಯಗಳು ಫ್ರೆಶ್​ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ನೀವು ಭಾರತೀಯ ಶೌಚಾಲಯದಲ್ಲಿ ಕೇವಲ 2 ರಿಂದ 3 ನಿಮಿಷಗಳಲ್ಲಿ ಫ್ರೆಶ್ ಆಗಬಹುದು. ಆದರೆ, ವೆಸ್ಟರ್ನ್ ಟಾಯ್ಲೆಟ್‌ನಲ್ಲಿ ನೀವು ಫ್ರೆಶ್ ಆಗಲು 5 ​​ರಿಂದ 10 ನಿಮಿಷಗಳ ಕಾಲ ಕುಳಿತುಕೊಳ್ಳಬೇಕು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!