ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಣ್ಣದಿರುವಾಗಿನಿಂದಲೂ ನಮ್ಮ ಭೂಮಿಗೆ ಹತ್ತಿರದ ಗ್ರಹ ಯಾವುದು ಅಂತ ಕೇಳಿದ್ರೆ ನಾವು ಹೇಳೋದು ಮಂಗಳ ಗ್ರಹ ಅಂತ. ಆದ್ರೆ ಈ ಗ್ರಹ ಯಾಕೆ ಕೆಂಪು ಬಣ್ಣದಿಂದ ಕೂಡಿರುತ್ತೆ ಅಂತ ಕೇಳಿದ್ರೆ ಅದಿಕ್ಕೆ ಉತ್ತರ ಇರ್ತಿರ್ಲಿಲ್ಲ. ಈಗ ಇದಕ್ಕೆ ಉತ್ತರ ಸಿಕ್ಕಿದೆ.
ಆರಂಭದಿಂದಲೂ ಕೆಂಪು ಬಣ್ಣದಿಂದಾಗಿ ತೀವ್ರ ಆಕರ್ಷಣೆ ಮತ್ತು ಚರ್ಚೆಗೆ ಒಳಗಾದ ಈ ಗ್ರಹವನ್ನ ‘ರೆಡ್ ಪ್ಲಾನೆಟ್’ ಎಂದು ಕರೆಯುವುದುಂಟು. ಇದೀಗ ವಿಜ್ಞಾನಿಗಳು ಈ ರಹಸ್ಯವನ್ನು ಬಹಿರಂಗಪಡಿಸಿದ್ದು, ಗ್ರಹದ ಬಣ್ಣವು ಅದರ ಮೇಲ್ಮೈಯಲ್ಲಿರುವ ತುಕ್ಕು ಬಣ್ಣದ ಧೂಳಿನಿಂದ ಉಂಟಾಗಿದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಇದನ್ನು ಫೆರಿಹೈಡ್ರೈಟ್ ಎಂದು ಕರೆಯಲಾಗುತ್ತದೆ.
ನೀರು ಮತ್ತು ಮಂಗಳ ಗ್ರಹದ ವಾತಾವರಣದಲ್ಲಿರುವ ಆಮ್ಲಜನಕದೊಂದಿಗೆ ಸೇರಿಕೊಂಡಾಗ, ಅದು ಕಬ್ಬಿಣದ ಆಕ್ಸೈಡ್ ರಚನೆಗೆ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ. ಮಂಗಳ ಗ್ರಹಕ್ಕೆ ಕಳುಹಿಸಲಾದ ಬಾಹ್ಯಾಕಾಶ ನೌಕೆ ಮತ್ತು ಲ್ಯಾಂಡರ್‌ಗಳಿಂದ ಪಡೆದ ಮಾಹಿತಿಗಳ ಆಧಾರದ ಮೇಲೆ ಈ ರಹಸ್ಯವನ್ನ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.